varthabharthi


ರಾಷ್ಟ್ರೀಯ

ಗಡಿಗಳತ್ತ ವಾಪಸಾಗಿ: ರೈತರಿಗೆ ಅಮರಿಂದರ್ ಸಿಂಗ್ ಮನವಿ

ವಾರ್ತಾ ಭಾರತಿ : 26 Jan, 2021

ಹೊಸದಿಲ್ಲಿ: ರೈತರು ಹಾಗೂ ಪೊಲೀಸರ ಘರ್ಷಣೆಗೆ ಕಾರಣವಾಗಿರುವ ದಿಲ್ಲಿಯ ಕೆಲವು ಸ್ಥಳಗಳನ್ನು ತೆರವು ಮಾಡಿ ದಿಲ್ಲಿ ಗಡಿಗಳತ್ತ ತೆರಳಿ ಎಂದು ಎಲ್ಲ ರೈತರುಗಳಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ಮನವಿ ಮಾಡಿದ್ದಾರೆ.

ದಿಲ್ಲಿ ಗಡಿಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ರೈತರುಗಳು ಕೇಂದ್ರ ಸರಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಾ ಬಂದಿದ್ದರು.

“ದಿಲ್ಲಿಯ ಚಿತ್ರಣಗಳು ಆಘಾತಕಾರಿಯಾಗಿವೆ..ಕೆಲವು ಸಮಾಜ ಘಾತುಕ ಶಕ್ತಿಗಳು ನಡೆಸಿರುವ ಈ ಹಿಂಸೆ ಸ್ವೀಕಾರಾರ್ಹವಲ್ಲ. ಇದು ಶಾಂತಿಯುತ ಪ್ರತಿಭಟನೆಯಿಂದ ಉಂಟಾಗಿರುವ ಅಭಿಮಾನವನ್ನು ತೊಡೆದುಹಾಕುತ್ತದೆ. ಕಿಸಾನ್ ನಾಯಕರು ದೂರ ಸರಿದಿದ್ದು, ಟ್ರ್ಯಾಕ್ಟರ್ ರ್ಯಾಲಿಯನ್ನು ಸ್ಥಗಿತಗೊಳಿಸಿದ್ದಾರೆ..ದಿಲ್ಲಿಯನ್ನು ಖಾಲಿ ಮಾಡಿ ದಿಲ್ಲಿ ಗಡಿಯತ್ತ ತೆರಳುವಂತೆ ನಾನು ನಿಜವಾದ ರೈತರನ್ನು ಒತ್ತಾಯಿಸುತ್ತೇನೆ'' ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)