varthabharthi


ಸಿನಿಮಾ

ಆಸ್ಕರ್ ರೇಸ್‍ನಲ್ಲಿ 'ಸೂರರೈ ಪೊಟ್ಟ್ರು'

ವಾರ್ತಾ ಭಾರತಿ : 27 Jan, 2021

ಹೊಸದಿಲ್ಲಿ: ಸೂರ್ಯ ಅಭಿನಯದ ಹಾಗೂ ಸುಧಾ ಕೊಂಗರ ನಿರ್ದೇಶನದ ತಮಿಳು ಚಲನಚಿತ್ರ 'ಸೂರರೈ ಪೊಟ್ಟ್ರು' ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಪೈಪೋಟಿಯಲ್ಲಿದೆ. ಅತ್ಯುತ್ತಮ ನಟ, ನಟಿ, ನಿರ್ದೇಶಕ ಮತ್ತಿತರ ಸಾಮಾನ್ಯ ವಿಭಾಗಗಳಲ್ಲಿ ಈ ಚಲನಚಿತ್ರ ಸ್ಪರ್ಧಿಸಲಿದೆ.

ಅಗ್ಗದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧರಿತ ಈ ಚಲನಚಿತ್ರದಲ್ಲಿ ಸೂರ್ಯ ಹೊರತಾಗಿ ಅಪರ್ಣ ಬಾಲಮುರಳಿ ಹಾಗೂ ಪರೇಶ್ ರಾವಲ್ ಪ್ರಧಾನ ಭೂಮಿಕೆಯಲ್ಲಿದ್ದಾರೆ

ಈ ಚಲನಚಿತ್ರ ಆಸ್ಕರ್ ರೇಸ್‍ನಲ್ಲಿದೆ ಎಂದು ಸಹ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ಮಂಗಳವಾರ ಗಣತಂತ್ರ ದಿನದಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಕೋವಿಡ್ ಲಾಕ್‍ಡೌನ್ ಸಂದರ್ಭ ಒಟಿಟಿ ಫ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ 'ಸೂರರೈ ಪೊಟ್ಟ್ರು' ಪಾತ್ರವಾಗಿತ್ತು.

ಗೋಲ್ಡನ್ ಗ್ಲೋಬ್ ಅವಾಡ್ರ್ಸ್ 2021ರಲ್ಲೂ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ 10 ಭಾರತೀಯ ಚಲನಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)