varthabharthi


ರಾಷ್ಟ್ರೀಯ

53 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದ ಪಾಲಾದ ಬಠಿಂಡಾ ಮಹಾನಗರ ಪಾಲಿಕೆ

ಪಂಜಾಬ್ ನಗರ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್ ಗೆ ಭರ್ಜರಿ ಗೆಲುವು, ಬಿಜೆಪಿಗೆ ತೀವ್ರ ಹಿನ್ನಡೆ

ವಾರ್ತಾ ಭಾರತಿ : 17 Feb, 2021

 ಚಂಡೀಗಢ,ಫೆ.18: ಪಂಜಾಬ್‌ನಲ್ಲಿ ಬುಧವಾರ ಮಹಾನಗರಪಾಲಿಕೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಏಳು ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಪಂಜಾಬ್ನ 8 ಮಹಾನಗರ ಪಾಲಿಕೆಗಳು ಹಾಗೂ 109 ನಗರಸಭೆಗಳಿಗೆ ಫೆಬ್ರವರಿ 14ರಂದು ಚುನಾವಣೆ ನಡೆದಿದ್ದು, ಶೇ.70ರಷ್ಟು ಮತದಾನವಾಗಿತ್ತು. ಇಂದು ಬೆಳಗ್ಗೆ 9:00 ಗಂಟೆಗೆ ಮತ ೆಣಿಕೆ ಆರಂಭವಾಗಿತ್ತು. ಭಠಿಂಡಾ, ಕಪೂರ್ತಲಾ, ಹೋಶಿಯಾರ್‌ಪುರ, ಪಠಾಣ್‌ಕೋಟ್, ಬಟಾಲಾ, ಮೋಗಾ ಹಾಗೂ ಅಬೋಹರ್ ಮಹಾನಗರಪಾಲಿಕೆಗಳಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವು ಸಾಧಿಸಿದೆ.ಮೊಹಾಲಿ ಮಹಾನಗರಪಾಲಿಕೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದೆ.

 ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್‌ನಲ್ಲಿ ರೈತರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವುದು ಗಮನಾರ್ಹವಾಗಿದೆ.

 ಪೌರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 9222 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ 2832 ಮಂದಿ ಪಕ್ಷೇತರರು, 2027 ಕಾಂಗ್ರೆಸ್ ಹಾಗೂ 1,469 ಮಂದಿ ಶಿರೋಮಣಿ ಅಕಾಲಿದಳದಿಂದ ಸ್ಪರ್ಧಿಸಿದ್ದರು. ಬಿಜೆಪಿ, ಎಎಪಿ ಹಾಗೂ ಬಿಎಸ್‌ಪಿ ಕ್ರಮವಾಗಿ 1,00,31,606 ಹಾಗೂ 160 ಅಭ್ಯರ್ಥಿಗಳನ್ನು ಕಣಕ್ಕಿಳಿದ್ದವು.

 ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಶಿರೋಮಣಿ ಅಕಾಲಿದಳವು ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಪಂಜಾಬ್ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)