varthabharthi


ಅಂತಾರಾಷ್ಟ್ರೀಯ

ಕಾಂಗೊದಲ್ಲಿ ದಾಳಿ: ಇಟಲಿ ರಾಯಭಾರಿ ಸಾವು

ವಾರ್ತಾ ಭಾರತಿ : 22 Feb, 2021

photo: twitter

 ಕಿನ್ಶಾಸ (ಡಿ. ಆರ್. ಕಾಂಗೊ), ಫೆ. 22: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿ. ಆರ್. ಕಾಂಗೊ) ದೇಶದ ಪೂರ್ವ ಭಾಗದಲ್ಲಿ ವಿಶ್ವಸಂಸ್ಥೆಯ ವಾಹನಗಳ ಸಾಲಿನ ಮೇಲೆ ಸೋಮವಾರ ನಡೆದ ಹೊಂಚು ದಾಳಿಯಲ್ಲಿ ಇಟಲಿ ರಾಯಭಾರಿ ಲೂಕ ಅಟನಾಸಿಯೊ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

 ಅಟನಾಸಿಯೊ, ಓರ್ವ ಇಟಲಿ ಪೊಲೀಸ್ ಅಧಿಕಾರಿ ಮತ್ತು ಅವರ ಕಾಂಗೊ ಚಾಲಕ ಕಾಂಗೊದಲ್ಲಿರುವ ವಿಶ್ವಸಂಸ್ಥೆಯ ಸ್ಥಿರತೆ ನಿರ್ವಹಣೆ ತಂಡ (ಎಂಒಎನ್ಯುಎಸ್ಸಿಒ)ದ ವಾಹನಗಳ ಸಾಲಿನಲ್ಲಿ ತೆರಳುತ್ತಿದ್ದಾಗ ದಾಳಿ ನಡೆದಿದೆ.
ವಿಶ್ವ ಆಹಾರ ಕಾರ್ಯಕ್ರಮ ಜಾರಿಯಲ್ಲಿರುವ ಶಾಲೆಗೆ ಭೇಟಿ ನೀಡುವುದಕ್ಕಾಗಿ ಕಾಂಗೊದ ಪೂರ್ವ ವಲಯದ ರಾಜಧಾನಿ ಗೋಮದಿಂದ ವಿಶ್ವಸಂಸ್ಥೆಯ ವಾಹನಗಳ ಸಾಲು ತೆರಳುತ್ತಿದ್ದಾಗ ದಾಳಿ ನಡೆದಿದೆ ಎಂದು ವಿಶ್ವ ಆಹಾರ ಕಾರ್ಯಕ್ರಮ ನೀಡಿರುವ ಹೇಳಿಕೆಯೊಂದು ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)