varthabharthi


ರಾಷ್ಟ್ರೀಯ

ಗುಜರಾತ್ ರಾಜ್ಯಸಭಾ ಚುನಾವಣೆ: ಎರಡು ಸ್ಥಾನಗಳಲ್ಲಿ ಬಿಜೆಪಿಗೆ ಜಯ

ವಾರ್ತಾ ಭಾರತಿ : 22 Feb, 2021

ಗಾಂಧಿನಗರ, ಫೆ. 22: ಗುಜರಾತ್ ನ ಎರಡು ರಾಜ್ಯಸಭಾ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಹಾಗೂ ಬಿಜೆಪಿ ನಾಯಕ ಅಭಯ್ ಭಾರದ್ವಾಜ್ ನಿಧನದ ಹಿನ್ನೆಲೆಯಲ್ಲಿ ಎರಡು ರಾಜ್ಯಸಭಾ ಸ್ಥಾನ ತೆರವಾಗಿತ್ತು.

ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲಾಗಿತ್ತು. ಎರಡು ಸ್ಥಾನಗಳಲ್ಲಿ ಬಿಜೆಪಿಯ ದಿನೇಶ್ ಅನವದಿಯಾ ಹಾಗೂ ರಾಮ್ ಮೊಕರಿಯಾ ಅವರು ಜಯ ಗಳಿಸಿದ್ದಾರೆ. ಅನವದಿಯಾ ಅವರು ರಾಜ್ಯ ಬಿಜೆಪಿಯ ಒಬಿಸಿ ಮೋರ್ಚಾದ ಅಧ್ಯಕ್ಷ ಹಾಗೂ ಮೊಕರಿಯಾ ಅವರು ಕೊರಿಯರ್ ಕಂಪೆನಿಯೊಂದರ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಪಟೇಲ್ ಹಾಗೂ ಭಾರದ್ವಾಜ್ ಅವರ ರಾಜ್ಯ ಸಭೆಯ ಅಧಿಕಾರಾವಧಿ ಕ್ರಮವಾಗಿ 2023 ಆಗಸ್ಟ್ ಹಾಗೂ 2026 ಜೂನ್ ನಲ್ಲಿ ಅಂತ್ಯಗೊಳ್ಳಲಿತ್ತು. ಆದರೆ, ಪಟೇಲ್ ಹಾಗೂ ಭಾರದ್ವಾಜ್ ಕೋವಿಡ್ ಸೋಂಕಿನಿಂದಾಗಿ ಕ್ರಮವಾಗಿ 2020 ನವೆಂಬರ್ 25 ಹಾಗೂ ಡಿಸೆಂಬರ್ 1ರಂದು ಮೃತಪಟ್ಟಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)