varthabharthi


ರಾಷ್ಟ್ರೀಯ

ಭಾರತ- ಫ್ರಾನ್ಸ್ ಜಂಟಿ ನೌಕಾ ಸಮರಾಭ್ಯಾಸಕ್ಕೆ ನಿರ್ಧಾರ

ವಾರ್ತಾ ಭಾರತಿ : 23 Feb, 2021

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ.23: ಮುಂದಿನ ಎಪ್ರಿಲ್‌ನಲ್ಲಿ ಫ್ರಾನ್ಸ್‌ನ ಚಾರ್ಲ್ಸ್ ಡೆ ಗುಲ್ಲೆ ವಿಮಾನ ವಾಹಕ ದಾಳಿ ಪಡೆ ಹಾಗೂ ಐಎನ್‌ಎಸ್ ವಿಕ್ರಮಾದಿತ್ಯ ಜಂಟಿಯಾಗಿ ಅರೇಬಿಯನ್ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ ಜಂಟಿ ಸಮರಾಭ್ಯಾಸ ನಡೆಸಲು ನಿರ್ಧರಿಸಿವೆ. ಈ ಮೂಲಕ ಉಭಯ ದೇಶಗಶಳ ರಕ್ಷಣಾ ಸಹಕಾರ ಮತ್ತಷ್ಟು ಬಲಗೊಳ್ಳಲಿದೆ.

ಜಂಟಿ ಕಾರ್ಯಾಚರಣೆಯ ದಿನಾಂಕವನ್ನು ಇಷ್ಟರಲ್ಲೇ ಉಭಯ ನೌಕಾಪಡೆಗಳು ನಿಗದಿಪಡಿಸಲಿವೆ. ಅಣ್ವಸ್ತ್ರ ಸಶಕ್ತ ಫ್ರಾನ್ಸ್ ವಾಹಕ ಪಡೆಯಲ್ಲಿ ಎರಡು ತುಕಡಿಗಳು ಹಾಗೂ ಒಂದು ಬೆಂಬಲ ನೌಕೆ ಸೇರಿರುತ್ತದೆ. ಕುರಿತು ಹಲವು ತಿಂಗಳುಗಳಿಂದ ಸಿದ್ಧತೆ ನಡೆಯುತ್ತಿದೆ. ಮೆಡಿಟರೇನಿಯನ್, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರ/ ಪರ್ಶಿಯನ್ ಕೊಲ್ಲಿಯಲ್ಲಿ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ತೊಡಗಿಸಿಕೊಂಡಿರುವ ಕ್ಲೆಮೆನ್ಸು 21 ಕೂಡಾ ಭಾಗವಹಿಸಲಿವೆ.

ಈ ಬಗ್ಗೆ ವಿವರ ನೀಡಿದ ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು, "ಹೊಸದಾಗಿ ನೇಮಕಗೊಂಡ ಕಮಾಂಡರ್ ರೇರ್ ಅಡ್ಮಿರಲ್ ಅಜಯ್ ಕೊಚ್ಚಾರ್ ನೇತೃತ್ವದ ತಂಡ ಫ್ರಾನ್ಸ್ ಕಾರ್ಯಪಡೆ ಜತೆ ವಿನೂತನ ಕಾರ್ಯಾಚರಣೆ ನಡೆಸಲಿದೆ. ಚಾರ್ಲ್ಸ್ ಡೆ ಗುಲ್ಲೆ 42,500 ಟನ್ ವಿಮಾನ ವಾಹಕವಾಗಿದ್ದು, ರಫೇಲ್ ಎಂ ಫೈಟರ್ ವಿಮಾನವನ್ನು ಒಳಗೊಂಡಿದೆ. ಐಎನ್‌ಎಸ್ ವಿಕ್ರಮಾದಿತ್ಯ ಸಾಂಪ್ರದಾಯಿಕ ವಿಮಾನ ವಾಹಕವಾಗಿದ್ದು, 44,500 ಟನ್ ತೂಕ ಹೊಂದಿದ್ದು, ಎಂಐಜಿ-29 ಕೆ ವಿಮಾನವನ್ನು ಒಳಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)