varthabharthi


ರಾಷ್ಟ್ರೀಯ

ಗುಜರಾತ್‌ ಪಾಲಿಕೆ ಚುನಾವಣೆ: ಬಿಜೆಪಿಗೆ ಮುನ್ನಡೆ, ಹಿನ್ನಡೆಯಲ್ಲಿ ಕಾಂಗ್ರೆಸ್

ವಾರ್ತಾ ಭಾರತಿ : 23 Feb, 2021

ನವದೆಹಲಿ: ಅಹಮದಾಬಾದ್, ವಡೋದರಾ ಸೇರಿದಂತೆ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಪಕ್ಷವು ಮುನ್ನಡೆ ಸಾಧಿಸಿದೆ. ಈ ನಾಗರಿಕ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವುದರಿಂದ ಆಡಳಿತ ಪಕ್ಷಕ್ಕೆ ಈ ಚುನಾವಣೆಯು ನಿರ್ಣಾಯಕವಾಗಿದೆ. ಮುಂದಿನ ವರ್ಷ ಗುಜರಾತ್‌ನಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯ ವೇಳೆ ಮತದಾರರ ಬಯಕೆಯೇನು? ಎಂಬುದನ್ನು ಈ ಫಲಿತಾಂಶಗಳು ಸೂಚಿಸುತ್ತವೆ ಎನ್ನಲಾಗಿದೆ.

ಆರು ಪುರಸಭೆಗಳಾದ್ಯಂತ 576 ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. 2015 ರಲ್ಲಿ ಬಿಜೆಪಿ ಈ ಪೈಕಿ 391 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 174 ಸ್ಥಾನಗಳನ್ನು ಗಳಿಸಿತ್ತು. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಸದ್ಯದ ಮಾಹಿತಿ ಪ್ರಕಾರ, ಬಿಜೆಪಿ 286 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 42 ಸ್ಥಾನಗಳಲ್ಲಿ ಮುಂದಿದೆ. ಅಹಮದಾಬಾದ್ ಮಹಾನಗರ ಪಾಲಿಕೆಯ 48 ವಾರ್ಡ್‌ಗಳಲ್ಲಿ 192 ಸ್ಥಾನಗಳು, ಸೂರತ್ ಮಹಾನಗರ ಪಾಲಿಕೆಯ 30 ವಾರ್ಡ್‌ಗಳಲ್ಲಿ 120 ಸ್ಥಾನಗಳು, ವಡೋದರಾ ಮಹಾನಗರ ಪಾಲಿಕೆಯ 19 ವಾರ್ಡ್‌ಗಳಲ್ಲಿ 76 ಸ್ಥಾನಗಳು, ರಾಜ್‌ಕೋಟ್ ಮಹಾನಗರ ಪಾಲಿಕೆಯ 18 ವಾರ್ಡ್‌ಗಳಲ್ಲಿ 72 ಸ್ಥಾನಗಳು, 52 ಸ್ಥಾನಗಳಿಗೆ ಮತ ಎಣಿಸಲಾಗುತ್ತಿದೆ.

ಅಹಮದಾಬಾದ್‌ನ 81 ಸ್ಥಾನಗಳಲ್ಲಿ ಬಿಜೆಪಿ ಮುಂದಿದ್ದರೆ, ಕಾಂಗ್ರೆಸ್ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)