varthabharthi


ರಾಷ್ಟ್ರೀಯ

ತಮಿಳುನಾಡಿನಲ್ಲಿ 9,10,11ನೇ ತರಗತಿಗಳಿಗೆ ಪರೀಕ್ಷೆಗಳಿಲ್ಲ, ಎಲ್ಲರೂ ಉತ್ತೀರ್ಣ: ಪಳನಿಸ್ವಾಮಿ

ವಾರ್ತಾ ಭಾರತಿ : 25 Feb, 2021

ಚೆನ್ನೈ: ತಮಿಳುನಾಡಿನಲ್ಲಿ 9,10 ಹಾಗೂ 11ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಗುರುವಾರ ಘೋಷಿಸಿದರು.

12ನೇ ತರಗತಿಯ ಪರೀಕ್ಷೆಯು ಮೇ 3 ಹಾಗೂ 21ರ ನಡುವೆ ನಡೆಯಲಿದೆ ಎಂದು ಸರಕಾರವು ಘೋಷಿಸಿದ ಕೆಲವೇ ದಿನಗಳ ಬಳಿಕ ತಮಿಳುನಾಡು ವಿಧಾನಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.

ಪರೀಕ್ಷೆಯಿಲ್ಲದೆ 9,10(ಎಸ್ ಎಸ್ ಎಲ್ ಸಿ) ಹಾಗೂ 11ನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಭಡ್ತಿ ನೀಡಲಾಗಿದೆ. ವೈದ್ಯಕೀಯ ತಜ್ಞರ ಸಲಹೆಯ ಆಧಾರದಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಪರಿಸ್ಥಿತಿ ಪೂರಕವಾಗಿಲ್ಲ ಎಂದು ತಜ್ಞರು ಸಲಹೆ ನೀಡಿದ್ದರು.

2020-21ನೇ ಶೈಕ್ಷಣಿಕ ವರ್ಷದ 9,10 ಹಾಗೂ 11ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದ್ದು, ಯಾವುದೇ ಸಾಮಾನ್ಯ ಪರೀಕ್ಷೆಗಳು ಇರುವುದಿಲ್ಲ. ಆಂತರಿಕ ಮೌಲ್ಯ ಮಾಪನದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಮೌಲ್ಯ ಮಾಪನ ಮಾಡಲಾಗುತ್ತದೆ. ಬಾಕಿ ಇರುವ ಎರಡು ಪರೀಕ್ಷೆಗಳನ್ನು ಎರಡು ನಿಯತಾಂಕಗಳಾಗಿ ವಿಂಗಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)