varthabharthi


ಕರಾವಳಿ

ಮುಫತ್ತಿಸ್ ಆತೂರು ಸ‌ಅದ್ ಮುಸ್ಲಿಯಾರ್ ನಿಧನ

ವಾರ್ತಾ ಭಾರತಿ : 25 Feb, 2021

ಮಂಳೂರು, ಫೆ. 25: ಮೂಲತಃ ಉಪ್ಪಿನಂಗಡಿ ಸಮೀಪದ ಆತೂರಿನ ಪ್ರಸ್ತುತ ನಗರ ಹೊರವಲಯದ ಬೋಂದೆಲ್ ನಿವಾಸಿ ಮುಫತ್ತಿಸ್ ಆತೂರ್ ಸಅದ್ ಮುಸ್ಲಿಯಾರ್ (59) ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಉಪ್ಪಿನಂಗಡಿ ಸಮೀಪದ ನಾಳ ಮತ್ತು ಕೂಳೂರು ಸಮೀಪದ ಪಂಜಿಮೊಗರು ಮದ್ರಸದಲ್ಲಿ ಸದರ್ ಮುಅಲ್ಲಿಮರಾಗಿ ಸೇವೆ ಸಲ್ಲಿಸಿದ್ದ ಅವರು ಸುನ್ನಿ ಸಂಘಟನಾ ಚತುರರಾಗಿದ್ದರು. 30ಕ್ಕೂ ಅಧಿಕ ವರ್ಷಗಳ ಕಾಲ ಮುಫತ್ತಿಸ್ ಆಗಿ ಸೇವೆ ಸಲ್ಲಿಸಿದ್ದ ಅವರು ಪ್ರಮುಖ ಸುನ್ನಿ ಸಂಘಟನೆಗಳ ಸ್ಥಾಪನೆಯಲ್ಲಿ ಮುಂಚೂಣಿಯ ನಾಯಕತ್ವ ವಹಿಸಿದ್ದರು.

ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ ರಾಜ್ಯಾಧ್ಯಕ್ಷರಾಗಿದ್ದ ಅವರು, ಎಸ್‌ಇಡಿಸಿ ಸಂಘಟನೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷರಾಗಿದ್ದ ಅವರು ಕೆಎಸ್‌ಜೆಎಂ ರಾಜ್ಯಾಧ್ಯಕ್ಷರಾಗಿದ್ದರು. ಕೇಂದ್ರ ವಿದ್ಯಾಭ್ಯಾಸ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ರಾಜ್ಯದಲ್ಲಿ ಹಲವು ಧಾರ್ಮಿಕ ಸಂಘ ಸಂಸ್ಥೆಗಳನ್ನು ಕಟ್ಟಿಬೆಳೆಸುವಲ್ಲಿ ಕಠಿಣ ಶ್ರಮಪಟ್ಟಿದ್ದ ಉಸ್ತಾದರು, ಆತೂರು ಉಸ್ತಾದ್ ಎಂದೇ ಚಿರಪರಿಚಿತರಾಗಿದ್ದರು.

ಶುಕ್ರವಾರ ಬೆಳಗ್ಗೆ 7:30ಕ್ಕೆ ಬೋಂದೆಲ್ ಮಸೀದಿಯಲ್ಲಿ ಮಯ್ಯಿತ್ ನಮಾಝ್ ನಡೆಯಲಿದ್ದು, 10ಗಂಟೆಗೆ ಹುಟ್ಟೂರು ಆತೂರು ಜುಮಾ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಕುಟುಂಬ ಮೂಲಗಳು ತಿಳಿಸಿದೆ.

ಅಂತಿಮ ದರ್ಶನ: ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೇಂದ್ರೀಯ ಅಧ್ಯಕ್ಷ ಸೈಯದ್ ಅಲೀ ಬಾಫಖೀ ತಂಙಲ್, ರಾಜ್ಯ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಮಾಣಿ ಉಸ್ತಾದ್, ಉಪಾಧ್ಯಕ್ಷ ಮುಹಮ್ಮದ್ ಸಅದಿ ವಳವೂರು, ಎಸ್‌ಇಡಿಸಿ ರಾಜ್ಯಾಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.

ಸಂತಾಪ: ಆತೂರು ಸಅದ್ ಮುಸ್ಲಿಯಾರ್ ನಿಧನಕ್ಕೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು, ಕೇಂದ್ರ ಸಮಿತಿ ಅಧ್ಯಕ್ಷರಾದ ಅಸ್ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಕಾರ್ಯಧ್ಯಕ್ಷರಾದ ಸೈಯದ್ ಮುಹಮ್ಮದ್ ತಂಙಳ್, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಕೋಶಾಧಿಕಾರಿ ದಾವೂದು ಕಜೆಮಾರ್, ಸಂವಹನ ಕಾರ್ಯದರ್ಶಿ ಅಬ್ದುಲ್ ಹಮೀದ್ ಅರೆಮಿಕ್ಸ್ ಮತ್ತು ಮರ್ಕಝ್ ತಅಲೀಮುಲ್ ಇಹ್ಸಾನ್ ಮೂಳೂರು, ಜನರಲ್ ಮ್ಯಾನೇಜರ್ ಯು.ಕೆ.ಮುಸ್ತಫ ಸಅದಿ, ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಶನ್, ಎಸ್‌ಜೆಎಂ ಉಡುಪಿ ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ ಕಾಪು, ಕಾರ್ಯದರ್ಶಿ ಇಬ್ರಾಹೀಂ ನಯೀಮಿ, ಎಸ್‌ಎಂಎ ಉಡುಪಿ ಜಿಲ್ಲಾಧ್ಯಕ್ಷ ಮುಹಮ್ಮದ್ ಮನ್ಸೂರ್ ಕುಂದಾಪುರ, ಅಬ್ದುರ್ರಶೀದ್ ಸಖಾಫಿ ಅಲ್ ಕಾಮಿಲ್ ಮಜೂರು, ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಅಸ್ಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಎಸ್‌ವೈಎಸ್ ಉಡುಪಿ ಜಿಲ್ಲಾಧ್ಯಕ್ಷ ಗುಡ್ವಿಲ್ ಮೊಯ್ದೀನ್ ಹಾಜಿ, ಕಾರ್ಯದರ್ಶಿ ಅಡ್ವಕೇಟ್ ಹಂಝತ್ ಹೆಜಮಾಡಿ, ಜಿಲ್ಲಾ ಮುಸ್ಲಿಮ್ ಜಮಾಅತ್ ಅಧ್ಯಕ್ಷ ರಫೀಕ್ ಬಿ.ಎಸ್.ಎಫ್, ಕಾರ್ಯದರ್ಶಿ ವೈ.ಬಿ.ಸಿ. ಬಶೀರ್ ಅಲಿ ಮೂಳೂರು, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ. ಅಬೂಬಕರ್ ನೇಜಾರು, ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು, ಎಸ್‌ಡಿಐ ಅಧ್ಯಕ್ಷ ಸೈಯದ್ ಫರೀದ್ ಉಡುಪಿ, ಸುಬ್ಹಾನ್ ಅಹ್ಮದ್ ಹೊನ್ನಾಳ, ಸಂತಾಪ ಸೂಚಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)