varthabharthi


ಕರಾವಳಿ

ಫೆ. 26ರಂದು ಕುಂಬ್ರ ಮರ್ಕಝ್ ಸಮ್ಮೇಳನ: ಎ.ಪಿ.ಉಸ್ತಾದ್ ಮುಖ್ಯ ಅತಿಥಿ

ವಾರ್ತಾ ಭಾರತಿ : 25 Feb, 2021

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಇಪ್ಪತ್ತನೆಯ ವಾರ್ಷಿಕ ಹಾಗೂ ಶರೀಅತ್ ಕಾಲೇಜಿನಲ್ಲಿ ಪದವಿ ಪಡೆದ ವಿದ್ಯಾರ್ಥಿನಿಯರ ಸನದು ದಾನ ಕಾರ್ಯಕ್ರಮವು ಫೆ.26 ಹಾಗೂ 27ರಂದು ಕುಂಬ್ರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್ ಭಾಗವಹಿಸಲಿದ್ದಾರೆ. ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಮುಂದಾಳುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶನಿವಾರ ನಡೆಯುವ ಸನದುದಾನ ಕಾರ್ಯಕ್ರಮದಲ್ಲಿ ಮಹಿಳೆಯರು ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು ಸನದ್ ದಾನಕ್ಕೆ ಪ್ರಮುಖ ಸಯ್ಯಿದಾತ್‌ಗಳು, ಗಣ್ಯ ಮಹಿಳೆಯರು ನೇತೃತ್ವ ನೀಡಲಿದ್ದಾರೆ ಎಂದು  ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)