varthabharthi


ಅಂತಾರಾಷ್ಟ್ರೀಯ

ಕೊರೋನದ ದೀರ್ಘಾವಧಿ ಲಕ್ಷಣ ಅರ್ಥೈಸಿಕೊಳ್ಳಿ: ವಿಶ್ವ ಆರೋಗ್ಯ ಸಂಸ್ಥೆ ಕರೆ

ವಾರ್ತಾ ಭಾರತಿ : 25 Feb, 2021

ಕೋಪನ್‌ಹೇಗನ್ (ಡೆನ್ಮಾರ್ಕ್), ಫೆ. 25: ಕೆಲವರಲ್ಲಿ ತಿಂಗಳುಗಳ ಬಳಿಕ ಕೊರೋನ ವೈರಸ್‌ನ ಲಕ್ಷಣಗಳು ಗೋಚರಿಸುವುದರಿಂದ, ಸಾಂಕ್ರಾಮಿಕದ ದೀರ್ಘಾವಧಿ ಪರಿಣಾಮಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಆದ್ಯತೆ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಪ್ರಾದೇಶಿಕ ನಿರ್ದೇಶಕ ಹಾನ್ಸ್ ಕ್ಲಜ್ ಗುರುವಾರ ಸರಕಾರಗಳನ್ನು ಒತ್ತಾಯಿಸಿದ್ದಾರೆ.

‘‘ಇದು ವಿಶ್ವ ಆರೋಗ್ಯ ಸಂಸ್ಥೆಯ ಆದ್ಯತೆಯಾಗಿದೆ ಹಾಗೂ ಅತ್ಯಂತ ಮಹತ್ವದ್ದಾಗಿದೆ. ಪ್ರತಿ ಆರೋಗ್ಯ ಅಧಿಕಾರಿಗಳಿಗೂ ಇದು ಆದ್ಯತೆಯಾಗಬೇಕು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)