ಅಹ್ಮದಾಬಾದ್ ಟೆಸ್ಟ್ ನಲ್ಲಿ ಇಂಗ್ಲೆಂಡ್ಗೆ ಹೀನಾಯ ಸೋಲು: ಸಂತೋಷ ವ್ಯಕ್ತಪಡಿಸಿದ ಮಹಿಳಾ ಕ್ರಿಕೆಟರ್!
photo: twitter(@AlexHartley93)
ಲಂಡನ್: ಭಾರತ ವಿರುದ್ಧ ಅಹ್ಮದಾಬಾದ್ ನಲ್ಲಿ ಗುರುವಾರ ಮೂರನೇ ಟೆಸ್ಟ್ ನ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಪುರುಷರ ತಂಡ 10 ವಿಕೆಟ್ ಗಳಿಂದ ಸೋತಿರುವುದಕ್ಕೆ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಟ್ವಿಟರ್ ನಲ್ಲಿ ಸಂತೋಷ ಹೊರಹಾಕಿ ಟೀಕೆಗೆ ಗುರಿಯಾಗಿದ್ದಾರೆ.
3ನೇ ಪಂದ್ಯವನ್ನು ಎರಡೇ ದಿನದಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ಪುರುಷರ ಕ್ರಿಕೆಟ್ ತಂಡಕ್ಕೆ ಧನ್ಯವಾದಗಳು. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯವನ್ನು ಆಡಲಿಕ್ಕಿದೆ ಎಂದು ಅಲೆಕ್ಸಾಂಡ್ರಾ ಹಾಟ್ರ್ಲೆ ಟ್ವೀಟಿಸಿದರು.
ಇಂಗ್ಲೆಂಡ್ ಮಹಿಳಾ ತಂಡ ನ್ಯೂಝಿಲ್ಯಾಂಡ್ ವಿರುದ್ಧ 2ನೇ ಏಕದಿನ ಪಂದ್ಯ ಆಡಲು ಸಿದ್ದತೆ ನಡೆಸಿದೆ ಎಂದು ಟ್ವಿಟರ್ ನ ಮೂಲಕ ಪಂದ್ಯಕ್ಕೆ ಪ್ರಚಾರ ನೀಡಿದರು.
ಇಂಗ್ಲೆಂಡ್ ಪುರುಷರ ತಂಡ ಭಾರತ ವಿರುದ್ಧ ಹೀನಾಯವಾಗಿ ಸೋತ ಬೆನ್ನಿಗೆ ಟ್ವೀಟಿಸಿದ ಅಲೆಕ್ಸಾಂಡರ್ ಹಾಟ್ರ್ಲೆ, ಇಂಗ್ಲೆಂಡ್ ಮಹಿಳಾ ತಂಡ ಇಂದು ರಾತ್ರಿ ಕ್ರಿಕೆಟ್ ಆಡುವುದಕ್ಕೆ ಮೊದಲೇ ಇಂಗ್ಲೆಂಡ್ ಹುಡುಗರು ಟೆಸ್ಟ್ ಪಂದ್ಯವನ್ನು ಮುಗಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಟ್ವೀಟಿಸಿದರು
ಎಲ್ಲ ಹುಡುಗರು ಮಹಿಳಾ ಕ್ರಿಕೆಟ್ ಪಂದ್ಯವನ್ನು ಬೆಂಬಲಿಸುತ್ತಿರುವುದನ್ನು ಪರಿಗಣಿಸಿದರೆ ಈ ಟ್ವೀಟ್ ನನಗೆ ತುಂಬಾ ಬೇಸರ ಉಂಟು ಮಾಡಿದೆ ಎಂದು ರೋರಿ ಬನ್ರ್ಸ್ ಟ್ವೀಟಿಸಿದರು. ಜೇಮ್ಸ್ ಆಂಡರ್ಸನ್ ಹಾಗೂ ಬೆನ್ ಸ್ಟೋಕ್ಸ್ ಅವರು ಬನ್ರ್ಸ್ ಟ್ವೀಟನ್ನು ಇಷ್ಟಪಟ್ಟಿದ್ದಾರೆ.
ಬೆನ್ ಡಕೆಟ್ ಕೂಡ ಹಾಟ್ರ್ಲಿ ಟ್ವೀಟ್ ಗೆ ಬೇಸರ ವ್ಯಕ್ತಪಡಿಸಿದರು. ಇದೊಂದು ಸಾಮಾನ್ಯ ಟ್ವೀಟ್. ಮಹಿಳಾ ತಂಡ ಸೋತರೆ ಪುರುಷರ ತಂಡ ಚಪ್ಪಾಳೆ ತಟ್ಟುವ ಇಮೊಜಿಯನ್ನು ಹಾಕುತ್ತಾರೆ ಎಂದು ಊಹಿಸಬೇಡಿ ಎಂದು ಟ್ವೀಟಿಸಿದರು.
Pray, do tell. pic.twitter.com/bRY6fJbsAb
— Isabelle Westbury (@izzywestbury) February 25, 2021