varthabharthi


ಕರ್ನಾಟಕ

ಲಿಮ್ಕಾ ಬುಕ್‍ನಲ್ಲಿ ದಾಖಲಾದ ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

ವಾರ್ತಾ ಭಾರತಿ : 26 Feb, 2021

Photo: Twitter.com/nitin_gadkari1

ಬೆಂಗಳೂರು, ಫೆ.26: ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ್ ಜಿಗಜಿಣಗಿ ನೇತೃತ್ವದಲ್ಲಿ ಚಾಲನೆ ನೀಡಲಾದ ಸೋಲಾಪುರ-ವಿಜಯಪುರ ಮಾರ್ಗದ 25.54 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಕಾಮಗಾರಿಯು ಕೇವಲ 18 ಗಂಟೆಗಳಲ್ಲಿ ಪೂರ್ಣಗೊಳಿಸಲಾಗಿದೆ.

ಈ ಕಾಮಗಾರಿ ಲಿಮ್ಕಾ ಬುಕ್‍ನಲ್ಲಿ ದಾಖಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟ್ವೀಟ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಈ ಕಾಮಗಾರಿ ಅನುಷ್ಠಾನ ಗೊಳ್ಳುತ್ತಿದೆ. ಈ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದ ಗೋವಿಂದ ಕಾರಜೋಳ ಹಾಗೂ ನಿತಿನ್ ಗಡ್ಕರಿ, ಇದಕ್ಕೆ ಕಾರಣಕರ್ತರಾದ ತಂಡವನ್ನು ಅಭಿನಂದಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)