varthabharthi


ಕರಾವಳಿ

ಉಡುಪಿಯಲ್ಲೂ ಸ್ಕಿಮ್ಮಿಂಗ್ ವಂಚನೆ ಪ್ರಕರಣ ಬೆಳಕಿಗೆ

ವಾರ್ತಾ ಭಾರತಿ : 26 Feb, 2021

ಫೈಲ್ ಫೋಟೊ

ಉಡುಪಿ, ಫೆ.26: ಉಡುಪಿಯ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಂದಲೂ ಸ್ಕಿಮ್ಮಿಂಗ್ ನಡೆಸಿ ಹಣ ವಂಚಿಸಿರುವ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಸುಷ್ಮಾ ಎಂಬವರ ಕೊಳಲಗಿರಿ ಶಾಖೆಯ ಬ್ಯಾಂಕ್ ಆಫ್ ಬರೋಡಾ ಖಾತೆ ಯಿಂದ 2021ರ ಜ.4ರಂದು 6,000ರೂ., ಮಹೇಶ್ ಸುವರ್ಣ ಎಂಬವರ ಕೆನರಾ ಬ್ಯಾಂಕ್ ಕಡೆಕಾರು ಶಾಖೆಯ ಖಾತೆಯಿಂದ 2020ರ ನ.18ರಂದು 33,300ರೂ., ಅಬ್ದುಲ್ ಫರ್ಮಾನ್ ಎಂಬವರ ಸಿಂಡಿಕೇಟ್ ಬ್ಯಾಂಕ್ ಆದಿಉಡುಪಿ ಶಾಖೆಯ ಖಾತೆಯಿಂದ 2020ರ ನ.17ರಂದು 25,000ರೂ. ಹಣವನ್ನು ಸ್ಕಿಮ್ಮಿಂಗ್ ನಡೆಸಿ ವಂಚಿಸಲಾಗಿತ್ತು.

ಮಂಗಳೂರು ಪೊಲೀಸರು ಇತ್ತೀಚೆಗೆ ಸ್ಕಿಮ್ಮಿಂಗ್ ನಡೆಸಿ, ಹಣ ವಂಚಿಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವುದನ್ನು ತಿಳಿದುಕೊಂಡ ಇವರು, ತಮ್ಮ ಖಾತೆ ಯಿಂದಲೂ ಇದೇ ರೀತಿಯಾಗಿ ಸ್ಕಿಮ್ಮಿಂಗ್ ನಡೆಸಿ, ಹಣವನ್ನು ವಂಚಿಸಿರ ಬಹುದೆಂದು ತಿಳಿದು, ಆರೋಪಿಗಳ ಮತ್ತು ಸೂಕ್ತ ಭದ್ರತೆ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಅದರಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣ ಗಳು ದಾಖಲಾಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)