ಎರಡು ವರ್ಷಗಳಿಂದ ನಾಪತ್ತೆ
ಕೋಟ, ಫೆ.26: ಯಡಾಡಿ ಮತ್ಯಾಡಿ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಿಕ್ಕು(62) ಎಂಬವರು 2019ರ ಜ.12ರಿಂದ ನಾಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
5.1 ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ತಲೆಕೂದಲು ಹೊಂದಿರುವ ಇವರು, ಸೀರೆರವಿಕೆ ಧರಿಸುತ್ತಾರೆ. ಮನೆಯ ಆಸುಪಾಸಿನ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿರುವುದರಿಂದ ದೂರು ನೀಡಲು ವಿಳಂಬವಾಗಿದೆ ಎಂದು ಚಿಕ್ಕು ಮಗ ಶಂಕರ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story