varthabharthi


ಅಂತಾರಾಷ್ಟ್ರೀಯ

ಬಂದೂಕುಧಾರಿಗಳಿಂದ 317 ಶಾಲಾ ಬಾಲಕಿಯರ ಅಪಹರಣ

ವಾರ್ತಾ ಭಾರತಿ : 26 Feb, 2021

ಸಾಂದರ್ಭಿಕ ಚಿತ್ರ

ಅಬುಜ (ನೈಜೀರಿಯ), ಫೆ. 26: ವಾಯುವ್ಯ ನೈಜೀರಿಯದ ರಾಜ್ಯ ಝಂಫರದಲ್ಲಿ ಅಜ್ಞಾತ ಬಂದೂಕುಧಾರಿಗಳು 317 ಶಾಲಾ ಬಾಲಕಿಯರನ್ನು ಅಪಹರಿಸಿದ್ದಾರೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಪೊಲೀಸರು ತಿಳಿಸಿದ್ದಾರೆ.ಕೇವಲ ವಾರದ ಹಿಂದೆ ಬಂದೂಕುಧಾರಿಗಳು ನೈಜರ್ ರಾಜ್ಯದಲ್ಲಿ 27 ಶಾಲಾ ಬಾಲಕರು ಸೇರಿದಂತೆ 42 ಮಂದಿಯನ್ನು ಅಪಹರಿಸಿದ್ದರು.

ಜಂಗೆಬೆ ಸರಕಾರಿ ಬಾಲಕಿಯರ ಹೈಸ್ಕೂಲ್‌ಗೆ ಗುರುವಾರ ಮಧ್ಯರಾತ್ರಿ ದಾಳಿ ನಡೆಸಿದ ಬಂದೂಕುಧಾರಿಗಳು ಬಾಲಕಿಯರನ್ನು ಅಪಹರಿಸಿದರು ಎಂದು ಇದಕ್ಕೂ ಮೊದಲು ಝಂಫರ ರಾಜ್ಯದ ವಾರ್ತಾಧಿಕಾರಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.‘‘

ನೈಜೀರಿಯದಲ್ಲಿ ಶಾಲಾ ಮಕ್ಕಳ ಮೇಲೆ ನಡೆದ ಇನ್ನೊಂದು ಬರ್ಬರ ದಾಳಿಯಿಂದ ನಾವು ಆಕ್ರೋಶಿತರಾಗಿದ್ದೇವೆ’’ ಎಂದು ಯುನಿಸೆಫ್ ನೈಜೀರಿಯ ಪ್ರತಿನಿಧಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)