varthabharthi


ರಾಷ್ಟ್ರೀಯ

ಎಡಪಕ್ಷ, ಕಾಂಗ್ರೆಸ್, ಐಎಸ್ಎಫ್ ನಿಂದ ಕೋಲ್ಕತಾದಲ್ಲಿ ಬೃಹತ್ ರ್‍ಯಾಲಿ

ವಾರ್ತಾ ಭಾರತಿ : 28 Feb, 2021

ಕೋಲ್ಕತಾ: ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು 10 ವರ್ಷ ಕಳೆದ ಬಳಿಕ ಎಡ ಪಕ್ಷವು ಕಾಂಗ್ರೆಸ್ ಹಾಗೂ ಹೊಸತಾಗಿ ರಚನೆಯಾಗಿರುವ ಇಂಡಿಯನ್ ಸೆಕ್ಯುಲರ್ ಫ್ರಂಟ್( ಐಎಸ್ಎಫ್)ನೊಂದಿಗೆ ರವಿವಾರ ಬೃಹತ್ ರ್‍ಯಾಲಿ ನಡೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿಯ ಬಳಿಕ ಮೂರನೇ ಶಕ್ತಿಯಾಗಿ ಹೊರಹೊಮ್ಮುವುದಾಗಿ ತೋರ್ಪಡಿಸಿದೆ.

ಇಲ್ಲಿನ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮೆಗಾ ರ್‍ಯಾಲಿ ನಡೆಸುವ ಮೂಲಕ ಎಡಪಕ್ಷ-ಕಾಂಗ್ರೆಸ್-ಐಎಸ್ ಎಫ್ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಪ್ರಚಾರ ಅಭಿಯಾನವನ್ನು ಆರಂಭಿಸಿದೆ.

ರ್‍ಯಾಲಿಯಲ್ಲಿ ಸಿಪಿಎಂ ನಾಯಕರು ತೃಣಮೂಲ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಜನಹಿತ ಸರಕಾರಕ್ಕಾಗಿ ಮೂರನೇ ಪರ್ಯಾಯ ಶಕ್ತಿಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)