ಅಮೆರಿಕದ ಮುಂದಿನ ಅಧ್ಯಕ್ಷರಾಗುವ ನೆಚ್ಚಿನ ವ್ಯಕ್ತಿ ಕಮಲಾ ಹ್ಯಾರಿಸ್: ಬ್ರಿಟಿಷ್ ಬುಕ್ಮೇಕರ್ ವರದಿ
ಲಂಡನ್, ಮಾ. 1: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ನೆಚ್ಚಿನ ವ್ಯಕ್ತಿಯಾಗಿದ್ದಾರೆ ಎಂದು ಬ್ರಿಟಿಷ್ ಬುಕ್ಮೇಕರ್ (ಬೆಟ್ಟಿಂಗ್ ಕಂಪೆನಿ) ಲ್ಯಾಡ್ಬ್ರೋಕ್ಸ್ ಹೇಳಿದೆ. ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ರನ್ನು ಅವರು ಜನಪ್ರಿಯತೆಯಲ್ಲಿ ಹಿಂದಿಕ್ಕಿದ್ದಾರೆ ಎಂದು ಅದು ಹೇಳಿದೆ.
22.2 ಶೇಕಡ ಸಾಧ್ಯತೆಯೊಂದಿಗೆ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ನೆಚ್ಚಿನ ವ್ಯಕ್ತಿ ಕಮಲಾ ಹ್ಯಾರಿಸ್ ಆಗಿದ್ದಾರೆ. ಹಾಲಿ ಅಧ್ಯಕ್ಷ ಜೋ ಬೈಡನ್ರ ಗೆಲುವಿನ ಸಾಧ್ಯತೆ 20 ಶೇಕಡದಷ್ಟಿದ್ದರೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲ್ಲುವ ಸಾಧ್ಯತೆ 14.3 ಶೇಕಡದಷ್ಟಿದೆ ಎಂದು ಲ್ಯಾಡ್ಬ್ರೋಕ್ಸ್ ತಿಳಿಸಿದೆ.
Next Story