varthabharthi


ರಾಷ್ಟ್ರೀಯ

ಚೆಂಡು ಎಂದು ಭಾವಿಸಿ ಪೊದೆಯಲ್ಲಿದ್ದ ಬಾಂಬ್ ಹೆಕ್ಕಿದ ಬಾಲಕ: ಓರ್ವ ಮೃತ್ಯು, ಇಬ್ಬರಿಗೆ ಗಾಯ

ವಾರ್ತಾ ಭಾರತಿ : 1 Mar, 2021

ಸಾಂದರ್ಭಿಕ ಚಿತ್ರ

ಪಾಟ್ನ, ಮಾ.1: ಬಿಹಾರದ ಖಗಾರಿಯಾ ಜಿಲ್ಲೆಯ ಶಾಲೆಯೊಂದರ ಆಟದ ಮೈದಾನದಲ್ಲಿ ಬಾಂಬ್ ಸ್ಫೋಟಿಸಿ ಒಬ್ಬ ಬಾಲಕ ಮೃತನಾಗಿದ್ದಾನೆ. ಇಬ್ಬರು ಬಾಲಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗೋಗ್ರಿ ಠಾಣಾ ವ್ಯಾಪ್ತಿಯ ಭಗವಾನ್ ಹೈಸ್ಕೂಲ್ ಮೈದಾನದಲ್ಲಿ ರವಿವಾರ ಸಂಜೆ ಆಟವಾಡುತ್ತಿದ್ದ ಮೂವರು ಬಾಲಕರು, ಮೈದಾನದ ಅಂಚಿನಲ್ಲಿದ್ದ ಪೊದೆಯಲ್ಲಿ ಅವಿತು ಕುಳಿತುಕೊಳ್ಳಲು ಮುಂದಾಗಿದ್ದಾರೆ. ಆಗ ಅಲ್ಲಿದ್ದ ಬಾಂಬನ್ನು ಕಂಡು ಚೆಂಡೆಂದು ಭಾವಿಸಿ ಕೋಲಿನಿಂದ ಹೊಡೆದಿದ್ದು ಬಳಿಕ ಒಬ್ಬ ಬಾಂಬನ್ನು ಹೆಕ್ಕಿದಾಗ ಅದು ಕೈಯಲ್ಲಿ ಸ್ಫೋಟಿಸಿದೆ.

ಮೂವರು ಬಾಲಕರೂ ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ 9 ವರ್ಷದ ಮುಹಮ್ಮದ್ ಕುರ್ಬಾನ್ ಎಂಬಾತ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ಖಗಾರಿಯಾ ಡಿವೈಎಸ್ಪಿ ಮನೋಜ್ ಕುಮಾರ್ ಹೇಳಿದ್ದಾರೆ. ಬಾಂಬ್ ದಾಳಿಗೆ ಸಂಚು ಹೂಡಿದ್ದ ಕೆಲವರು ಬಾಂಬನ್ನು ಪೊದೆಯಲ್ಲಿ ಬಚ್ಚಿಟ್ಟಿರುವ ಶಂಕೆಯಿದೆ. ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)