varthabharthi


ನಿಧನ

ರಾಜೀವಿ ಶೆಟ್ಟಿ

ವಾರ್ತಾ ಭಾರತಿ : 2 Mar, 2021

ಉಡುಪಿ, ಮಾ. 2: ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ (93) ಇವರು ಇತ್ತೀಚೆಗೆ ನಿಧನರಾದರು. ಸ್ವಾತಂತ್ರ್ಯ ಹೋರಾಟ ಗಾರ ದಿ. ಕುರ್ಕಾಲು ಗಣಪಯ್ಯ ಶೆಟ್ಟರ ಮಗಳಾದ ರಾಜೀವಿ ಶೆಟ್ಟಿ, ಮೂಳೂರು ಬೈಲುಮನೆ ಶತಾಯು ದಿ. ಬಾಬು ಶೆಟ್ಟಿಯವರ ಪತ್ನಿ.

ತಂದೆಯವರು ಸ್ಥಾಪಿಸಿದ ಕುಂಜಾರು ಗಿರಿಜಾ ಹಿರಿಯ ಪ್ರಾಥುಕ ಶಾಲೆಯಲ್ಲಿ ಶಿಕ್ಷಕಿಯಾಗಿ, ಶಾಲಾ ಸಂಚಾಲಕಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಕುರ್ಕಾಲು ಮಹಿಳಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿ, ನಂತರ ಅಧ್ಯಕ್ಷೆ ಯಾಗಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿ ದ್ದಾರೆ. ಉಡುಪಿ ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಉಪಾಧ್ಯಕ್ಷೆಯಾಗಿ ಸ್ತ್ರೀಯರಿಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಇವರು, ಗ್ರಾಮದಲ್ಲಿ ರಾಜಿ ಪಂಚಾತಿಕೆಗಳನ್ನು ನ್ಯಾಯಯುತವಾಗಿ ನಡೆಸುತ್ತಿದ್ದರು.

ಇವರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಲ್ಲದೇ ಅಪಾರ ಸಂಖ್ಯೆಯ ವಿದ್ಯಾರ್ಥಿ ಅಭಿಮಾನಿಗಳನ್ನು ಅಗಲಿದ್ದಾರೆ. ರಾಜೀವಿ ಶೆಟ್ಟಿ ಕರಾವಳಿಯ ಖ್ಯಾತ ಕವಿ ದಿ. ಬಿ.ಎಸ್.ಕುರ್ಕಾಲರ ಹಿರಿಯ ಸಹೋದರಿ ಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)