varthabharthi


ನಿಮ್ಮ ಅಂಕಣ

ಏರಿದ ಬೆಲೆಯನ್ನೂ ಸಮರ್ಥಿಸಿಕೊಳ್ಳುವವರು

ವಾರ್ತಾ ಭಾರತಿ : 3 Mar, 2021
-ಸುರೇಶ್ ಯಳ್ಳಾರ್ತಿ, ರಾಯಚೂರು

ಮಾನ್ಯರೇ,

ಕೊರೋನ ನಂತರದಲ್ಲಿ ದಿನ ಬಳಕೆ ವಸ್ತುಗಳ ಬೆಲೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಜೊತೆಗೆ ಬೆಂಕಿ ಕೆಂಡವೇ ಬಿದ್ದಂತಾಗಿದೆ.

ಅಡುಗೆ ಇಂಧನದ ಬೆಲೆಯು ಫೆಬ್ರವರಿ ಆರಂಭದಿಂದ ಕೊನೆಯವರೆಗೆ ಅಂದರೆ ಕೇವಲ ಒಂದೇ ತಿಂಗಳಲ್ಲಿ 125 ರೂ. ಏರಿಕೆ ಆಗಿರುವುದರಿಂದ ಬಡವರು ಕಂಗಾಲಾಗಿದ್ದಾರೆ. ಕೆಲವರಂತೂ ಕೇಂದ್ರ ಸರಕಾರದ ಯೋಜನೆಯಲ್ಲಿ ಉಚಿತವಾಗಿ ಸಿಕ್ಕ ಸಿಲಿಂಡರ್‌ನ್ನು ಮೂಲೆಗೆ ಎಸೆದು ಮಂಕಾಗಿ ಕೂತಿದ್ದಾರೆ. ಇದು ಬರೀ ಅನಿಲ ಸಿಲಿಂಡರ್‌ನ ಕತೆಯಷ್ಟೇ ಅಲ್ಲ, ಅಡುಗೆ ಎಣ್ಣೆ, ಬೇಳೆಕಾಳುಗಳು, ಪೆಟ್ರೋಲ್, ಡೀಸೆಲ್ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಜೀವ ಹಿಂಡಿ ಹಿಪ್ಪೆಯಾಗಿಸುತ್ತಿದೆ.

ಒಂದು ಜನಪರ ಸರಕಾರ ಸಾಮಾನ್ಯ ಜನರ ಜೀವನವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರ ನಡೆಸಬೇಕೇ ಹೊರತು ಬಂಡವಾಳಶಾಹಿಗಳ ಆಣತಿಯಂತೆ ನಡೆಯಬಾರದು.

ದೇಶದ ಜನರ ಹಿತದೃಷ್ಟಿಯಿಂದ ತೈಲಬೆಲೆ ಇತ್ಯಾದಿಯ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ತುಲನೆ ಮಾಡಿ ಬೆಲೆ ಇಳಿಕೆಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಚಿಂತಿಸಬೇಕಾದುದು ಕೇಂದ್ರ ಸರಕಾರದ ಕರ್ತವ್ಯ, ಆದರೆ ಅವೆಲ್ಲವನ್ನೂ ಮರೆತು ಬೆಲೆ ಏರಿಕೆಯನ್ನೇ ಸಮರ್ಥನೆ ಮಾಡಿಕೊಳ್ಳುವುದು ನಾಚಿಕೆಗೇಡಿನ ಸಂಗತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)