varthabharthi


ರಾಷ್ಟ್ರೀಯ

ಮಾಜಿ ಟಿಎಂಸಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆ

ವಾರ್ತಾ ಭಾರತಿ : 6 Mar, 2021

ಹೊಸದಿಲ್ಲಿ,ಮಾ.6: ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಟಿಎಂಸಿ ಸಂಸದ ದಿನೇಶ್ ತ್ರಿವೇದಿ ಅವರು ಶನಿವಾರ ದಿಲ್ಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಸಚಿವ ಪಿಯೂಷ ನಡ್ಡಾ ಅವರ ಉಪಸ್ಥಿತಿಯಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು.

ರಾಜ್ಯದಲ್ಲಿಯ ಹಿಂಸಾಚಾರಗಳಿಂದಾಗಿ ತನಗೆ ಉಸಿರುಗಟ್ಟಿದಂತಾಗಿತ್ತು. ಬಿಜೆಪಿಗೆ ಸೇರ್ಪಡೆ ತಾನು ಕಾಯುತ್ತಿದ್ದ ಸುವರ್ಣ ಘಳಿಗೆಯಾಗಿತ್ತು ಎಂದು ತ್ರಿವೇದಿ ಈ ಸಂದರ್ಭದಲ್ಲಿ ಹೇಳಿದರು.

ತ್ರಿವೇದಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಡ್ಡಾ,ಪ.ಬಂಗಾಳದ ಈ ಹಿರಿಯ ನಾಯಕರು ಒಳ್ಳೆಯ ವ್ಯಕ್ತಿ. ಆದರೆ ಅವರು ತಪ್ಪು ಪಕ್ಷದಲ್ಲಿದ್ದರು,ಆದರೆ ಈಗ ಸರಿಯಾದ ಪಕ್ಷದಲ್ಲಿದ್ದಾರೆ ಎಂದರು.

ನಾಟಕೀಯ ವಿದ್ಯಮಾನವೊಂದರಲ್ಲಿ ಫೆ.12ರಂದು ರಾಜ್ಯಸಭೆಯಲ್ಲಿ ಬಜೆಟ್ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ತ್ರಿವೇದಿ,ತಾನು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮತ್ತು ರಾಜ್ಯಸಭಾ ಸದಸ್ಯತ್ವವನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)