varthabharthi


ನಿಧನ

ಎಂ.ಕೆ. ಸಾಲಿಯಾನ್

ವಾರ್ತಾ ಭಾರತಿ : 17 Mar, 2021

ಉಪ್ಪಿನಂಗಡಿ : ನಿವೃತ್ತ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಎಂ.ಕೆ. ಸಾಲಿಯಾನ್ (88) ಅಲ್ಪ ಕಾಲದ ಅನಾರೋಗ್ಯ ದಿಂದಾಗಿ ಇಳಂತಿಲ ಪೆದಮಲೆಯಲ್ಲಿನ ಅವರ ಸ್ವ ಗೃಹದಲ್ಲಿ ಬುಧವಾರದಂದು ನಿಧನರಾದರು.

ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ದೀರ್ಘ ಸಮಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಇವರ ಕಾಲದಲ್ಲಿ ಹಲವಾರು ಕ್ರೀಡಾ ಪ್ರತಿಭೆಗಳು ಅನಾವರಣಗೊಳ್ಳಲು ಕಾರಣರಾಗಿದ್ದರು. ಶಿಸ್ತಿನ ಸಿಪಾಯಿಯಂತಿದ್ದ ಇವರು ಹಲವಾರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ನೆರವು ನೀಡುತ್ತಾ ಸಮಾಜಮುಖಿಯಾಗಿ ಜೀವನ ನಡೆಸುತ್ತಿದ್ದರು.

ನಿವೃತ್ತಿಯ ಬಳಿಕ ಕೃಷಿ ಕ್ಷೇತ್ರದತ್ತ ಗಮನ ಹರಿಸಿದ್ದ ಇವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)