ಮೊಝಾಂಬಿಕ್: ಪಾಲ್ಮ ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಉಗ್ರರ ಸಾವು; ಸೇನಾಧಿಕಾರಿ ಘೋಷಣೆ
ಮಪುಟೊ (ಮೊಝಾಂಬಿಕ್), ಎ. 5: ಭಯೋತ್ಪಾದಕ ಗುಂಪು ಐಸಿಸ್ ವಶಪಡಿಸಿಕೊಂಡಿರುವ ಉತ್ತರ ಮೊಝಾಂಬಿಕ್ನ ಪಟ್ಟಣ ಪಾಲ್ಮವನ್ನು ಮರುವಶಪಡಿಸಿಕೊಳ್ಳಲು ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಗಣನೀಯ ಸಂಖ್ಯೆಯ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಮೊಝಾಂಬಿಕ್ ಸೇನಾಧಿಕಾರಿ ಚೊಂಗೊ ವಿದಿಗಲ್ ಹೇಳಿದ್ದಾರೆ.
ಈ ಪಟ್ಟಣವನ್ನು ಐಸಿಸ್ ಮಾರ್ಚ್ ತಿಂಗಳ ಕೊನೆಯ ಭಾಗದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಈ ನಗರದ ‘ಸುರಕ್ಷಿತ’ವಾಗಿದೆ ಎಂದು ಅವರು ಸರಕಾರಿ ಟೆಲಿವಿಶನ್ ಟಿವಿಎಮ್ಗೆ ಹೇಳಿದರಾದರೂ, ಪಟ್ಟಣದ ನಿಯಂತ್ರಣವನ್ನು ಸೇನೆ ತೆಗೆದುಕೊಂಡಿದೆ ಎಂಬುದಾಗಿ ಘೋಷಿಸಲಿಲ್ಲ.
‘‘ವಾಯುನೆಲೆ ಪ್ರದೇಶವೊಂದನ್ನು ಮಾತ್ರ ನಾವು ಮುಕ್ತಗೊಳಿಸಬೇಕಾಗಿತ್ತು. ಅದನ್ನು ನಾವು ಇಂದು ಬೆಳಗ್ಗೆ ಮಾಡಿದೆವು. ಈಗ ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ’’ ಎಂದು ಅವರು ನುಡಿದರು.
Next Story