ಜೈಲಿನ ಮೇಲೆ ದಾಳಿ; 1,800 ಕೈದಿಗಳು ಪರಾರಿ
ಅಬುಜ (ನೈಜೀರಿಯ), ಎ. 6: ದಕ್ಷಿಣ ನೈಜೀರಿಯದಲ್ಲಿ ಮಶೀನ್ ಗನ್ಗಳು ಮತ್ತು ಗ್ರೆನೇಡ್ಗಳೊಂದಿಗೆ ಸಂಘಟಿತ ದಾಳಿ ನಡೆಸಿದ ದುಷ್ಕರ್ಮಿಗಳು, ಜೈಲೊಂದರ 1,800ಕ್ಕೂ ಅಧಿಕ ಕೈದಿಗಳನ್ನು ಬಿಡುಗಡೆಗೊಳಿಸಿದ್ದಾರೆ.
ನೈಜೀರಿಯದ ಇಮೊ ಎಂಬ ರಾಜ್ಯದ ಓವೆರಿ ಎಂಬ ಪಟ್ಟಣದಲ್ಲಿ ಸೋಮವಾರ ಮುಂಜಾನೆ ಸುಮಾರು 2 ಗಂಟೆಗೆ ದಾಳಿ ಆರಂಭವಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ಮುಂದುವರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಂದೂಕುಧಾರಿಗಳು ಇತರ ಪೊಲೀಸ್ ಮತ್ತು ಸೇನಾ ಕಟ್ಟಡಗಳ ಮೇಲೂ ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು.
‘‘ಪರಾರಿಯಾಗಿರುವ ಕೈದಿಗಳನ್ನು ಮರುಬಂಧಿಸಲು ತೀವ್ರ ಪ್ರಯತ್ನಗಳನ್ನು ಮಾಡಲಾಗುತ್ತಿದೆ’’ ಎಂದು ನೈಜೀರಿಯ ಬಂದೀಖಾನೆ ಇಲಾಖೆಯ ವಕ್ತಾರರೊಬ್ಬರು ತಿಳಿಸಿದರು.
ಈ ದಾಳಿಯ ಜವಾಬ್ದಾರಿಯನ್ನು ಯಾರೂ ವಹಿಸಿಕೊಂಡಿಲ್ಲ.
Next Story