varthabharthi


ಕರಾವಳಿ

ಸುಳ್ಯ: ಕಾಡಾನೆ ದಾಳಿಗೆ ವೃದ್ಧ ಬಲಿ

ವಾರ್ತಾ ಭಾರತಿ : 7 Apr, 2021

ಸುಳ್ಯ: ಕಾಡಾನೆ ದಾಳಿಗೆ ಒಳಗಾಗಿ ವ್ಯಕ್ತಿಯೋರ್ವರು ಸಾವನಪ್ಪಿದ ಘಟನೆ ಕಲ್ಮಕಾರಿನಿಂದ ವರದಿಯಾಗಿದೆ.

ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ (80) ಮೃತರು. 

ಅವರು ನೀರಿನ ಪೈಪ್ ಸರಿ ಮಾಡಲೆಂದು ಮನೆಯ ಹೊರಗೆ ಬಂದ  ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)