ಅಂತಾರಾಷ್ಟ್ರೀಯ
ಟರ್ಕಿ ವಿಫಲ ಕ್ಷಿಪ್ರಕ್ರಾಂತಿ: 22 ಮಾಜಿ ಸೈನಿಕರಿಗೆ ಜೀವಾವಧಿ ಶಿಕ್ಷೆ
ವಾರ್ತಾ ಭಾರತಿ : 7 Apr, 2021

ಅಂಕಾರ (ಟರ್ಕಿ), ಎ. 7: 2016ರಲ್ಲಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸಲಾಗಿದ್ದ ವಿಫಲ ಕ್ಷಿಪ್ರಕ್ರಾಂತಿಯಲ್ಲಿ ವಹಿಸಿದ ಪಾತ್ರಕ್ಕಾಗಿ 22 ಮಾಜಿ ಸೈನಿಕರಿಗೆ ಟರ್ಕಿಯ ನ್ಯಾಯಾಲಯವೊಂದು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಂಕಾರದ ನ್ಯಾಯಾಲಯವು 497 ಮಾಜಿ ಸೈನಿಕರ ಸಾಮೂಹಿಕ ವಿಚಾರಣೆ ನಡೆಸಿದ ಬಳಿಕ ಈ ತೀರ್ಪು ನೀಡಿದೆ.
2016ರ ವಿಫಲ ಕ್ಷಿಪ್ರಕ್ರಾಂತಿಯ ಬಳಿಕ, ಭಾರೀ ಪ್ರಮಾಣದಲ್ಲಿ ದಮನ ಕಾರ್ಯಾಚರಣೆ ನಡೆಸಲಾಗಿತ್ತು ಹಾಗೂ ನೂರಾರು ಮಂದಿಯನ್ನು ಬಂಧಿಸಲಾಗಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)