ಕ್ರೀಡೆ
ಏಶ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್
ಭಾರತದ ತಂಡವನ್ನು ಮುನ್ನಡೆಸಲಿರುವ ಮೇರಿ ಕೋಮ್

ಹೊಸದಿಲ್ಲಿ: ಮುಂದಿನ ಮೇ 21ರಿಂದ 31ರವರೆಗೆ ನಡೆಯಲಿರುವ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ (51 ಕೆ.ಜಿ.) ಭಾರತದ ಮಹಿಳಾ ಸವಾಲನ್ನು ಮುನ್ನಡೆಸಲಿದ್ದಾರೆ.
ಮೇರಿ ಕೋಮ್ ಐದು ಬಾರಿ ಚಿನ್ನದ ಪದಕಗಳನ್ನು ಒಳಗೊಂಡಂತೆ ಆರು ಬಾರಿ ಏಶ್ಯ ಚಾಂಪಿಯನ್ಶಿಪ್ನಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಅವರು 2019ರ ಆವೃತ್ತಿಯಿಂದ ಹೊರಗುಳಿದಿದ್ದರು. ಇತ್ತೀಚೆಗೆ ಸ್ಪೇನ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು. ಇದು ವರ್ಷದ ಹಿಂದೆ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ನಂತರ ಅವರ ಮೊದಲ ಸ್ಪರ್ಧಾತ್ಮಕ ಪ್ರವಾಸವಾಗಿದೆ.
ಏಶ್ಯನ್ ಚಾಂಪಿಯನ್ಶಿಪ್ ತಂಡದಲ್ಲಿ ಅವಕಾಶ ಪಡೆದಿರುವ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (69 ಕೆ.ಜಿ.). ಅಸ್ಸಾಂನ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ಒಲಿಂಪಿಕ್ಸ್ನಲ್ಲೂ ಅವಕಾಶ ಪಡೆದಿದ್ದಾರೆ.
ಸಿಮ್ರಾಂಜಿತ್ ಕೌರ್ (60 ಕೆ.ಜಿ. ) ಮತ್ತು ಪೂಜಾ ರಾಣಿ (75 ಕೆ.ಜಿ.) ತಂಡದಲ್ಲಿರುವ ಟೋಕಿಯೊ ಅರ್ಹತೆ ಪಡೆದ ಇತರ ಬಾಕ್ಸರ್ಗಳು. ಬ್ಯಾಂಕಾಕ್ನಲ್ಲಿ ನಡೆದ ಚಾಂಪಿಯನ್ಶಿಪ್ನ ಹಿಂದಿನ ಆವೃತ್ತಿಯಲ್ಲಿ ಕೌರ್ ಬೆಳ್ಳಿ ಪದಕ ಗೆದ್ದಿದ್ದರು.
ರಾಣಿ ತನ್ನ ಖಾತೆಗೆ ಸತತ ಎರಡನೇ ಏಶ್ಯನ್ ಚಿನ್ನವನ್ನು ಸೇರಿಸುವ ಗುರಿಯನ್ನು ಹೊಂದಿದ್ದಾರೆ. 81 ಕೆ.ಜಿ. ವಿಭಾಗದಲ್ಲಿ ಅವರು 2019ರಲ್ಲಿ ಉನ್ನತ ಗೌರವಗಳನ್ನು ಗೆದ್ದರು. ಕಳೆದ ತಿಂಗಳು ಸ್ಪೇನ್ನಲ್ಲಿ ನಡೆದ ತನ್ನ ಮೊದಲ ಅಂತರ್ರಾಷ್ಟ್ರೀಯ ಸ್ಪರ್ಧಾತ್ಮಕ ಈವೆಂಟ್ನಲ್ಲಿ ಚಿನ್ನದ ಪದಕ ಗೆದ್ದ ಜಾಸ್ಮಿನ್ (57 ಕೆ.ಜಿ.) ಮತ್ತು 2019ರ ಏಶ್ಯನ್ ಕೂಟದಲ್ಲಿ ಕಂಚು ವಿಜೇತರಾಗಿದ್ದ ಅನುಭವಿ ಮನೀಷಾ ಮುಂಚೂಣಿಯಲ್ಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ