ಬೈಕಂಪಾಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಬಿ.ಎ.ಅಬ್ದುಲ್ ನಾಸಿರ್ ಪುನರಾಯ್ಕೆ
ಮಂಗಳೂರು, ಎ.10: ಬೈಕಂಪಾಡಿಯ ಮೊಹಿಯುದ್ದೀನ್ ಜುಮಾ ಮಸೀದಿಯ ನೂತನ ಸಾಲಿನ ಅಧ್ಯಕ್ಷರಾಗಿ ಬಿ.ಎ.ಅಬ್ದುಲ್ ನಾಸಿರ್ (ಲಕ್ಕಿಸ್ಟಾರ್) ಪುನರಾಯ್ಕೆಯಾಗಿದ್ದಾರೆ.
ಎ.9ರಂದು ಮಸೀದಿಯ ಜಮಾಅತ್ ಖಾನೆಯಲ್ಲಿ ಜರುಗಿದ ಮೊಹಿಯುದ್ದಿನ್ ಜುಮಾ ಮಸೀದಿ ಮುಸ್ಲಿಂ ಜಮಾಅತ್ ನ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾದ್ಯಕ್ಷರಾಗಿ ಮುಹಮ್ಮದ್ ಚೈಬಾವು, ಕಾರ್ಯದರ್ಶಿಯಾಗಿ ಹಸನ್ ಶಮೀರ್, ಜೊತೆ ಕಾರ್ಯದರ್ಶಿಯಾಗಿ ಉಮರ್ ಫಾರೂಕ್ ಹಾಗೂ ಕೋಶಾಧಿಕಾರಿ ಸೈದುದ್ದೀನ್ ಮತ್ತು 11 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ನೂತನ ಆಡಳಿತ ಸಮಿತಿಯು 2021ರಿಂದ 2024ರವರಗೆ ಅಸ್ತಿತ್ವದಲ್ಲಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
Next Story