varthabharthi


ಬೆಂಗಳೂರು

ಜೈಲಿನಲ್ಲಿರುವ ಕೈದಿಗೆ ಕೊರಿಯರ್ ಮೂಲಕ ಬಂತು ಗಾಂಜಾ !

ವಾರ್ತಾ ಭಾರತಿ : 10 Apr, 2021

ಬೆಂಗಳೂರು, ಎ.10: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಕೈದಿಯೊಬ್ಬನಿಗೆ ಕೇರಳದಿಂದ ಕೊರಿಯರ್‍ನಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮುಝೀಬ್‍ಗೆ ಕೊರಿಯರ್ ಮೂಲಕ ಝನೇಬ್ ಎಂಬಾತ ಕೇರಳದ ಕಣ್ಣೂರಿನಿಂದ ಕೈದಿ ನಂಬರ್ 1716 ಹೆಸರಿನಲ್ಲಿ ಕೊರಿಯರ್ ಕಳಿಸಿರುವುದು ಪತ್ತೆಯಾಗಿದೆ.

ಕೇರಳದಿಂದ ಬಂದ ತಿಂಡಿ ಹಾಗೂ ಪ್ಯಾಕೆಟ್‍ಗಳಲ್ಲಿ ಪೌಡರ್ ಸಿಕ್ಕಿದೆ. ಆರೋಪಿ ಡ್ರಗ್ಸ್ ಪೌಡರನ್ನು ಬಾಟಲಿಯಲ್ಲಿ ತುಂಬಿ ಇಟ್ಟಿದ್ದ. ಅನುಮಾನ ಬಂದು ಜೈಲು ಸಿಬ್ಬಂದಿ ತಪಾಸಣೆ ಮಾಡಿದಾಗ ಹೆರಾಯಿನ್ ರೀತಿ ಇದ್ದ ಪೌಡರ್ ಬೆಳಕಿಗೆ ಬಂದಿದ್ದು, ಆರೋಪಿ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)