ಮಂಗಳೂರು: 45 ಅಡಿ ಆಳದ ಬಾವಿಗಿಳಿದು ನಾಯಿಯನ್ನು ರಕ್ಷಿಸಿದ ಮಹಿಳೆ
ಮಂಗಳೂರು, ಎ.10: ನಗರದ ಬಲ್ಲಾಳ್ಬಾಗ್ ಸಮೀಪದ ದೊಡ್ಡಹಿತ್ಲು ಎಂಬಲ್ಲಿ ಬಾಡಿಗೆ ಮನೆಯೊಂದರ ನಿವಾಸಿ ರಜನಿ ಡಿ. ಶೆಟ್ಟಿ ಎಂಬವರು ಶನಿವಾರ ಬೆಳಗ್ಗೆ ಬಿಜೈ ನ್ಯೂರೋಡಿನಲ್ಲಿ ಸುಮಾರು 45 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ರಕ್ಷಿಸಿ ಗಮನ ಸೆಳೆದಿದ್ದಾರೆ.
ಬೀದಿ ನಾಯಿಗಳಿಗೆ ಆಸರೆಯಾಗಿ ಕೆಲಸ ಮಾಡುವ ರಜನಿ ಡಿ. ಶೆಟ್ಟಿ ತನ್ನ ಮನೆಯಲ್ಲಿ ದಿನನಿತ್ಯ ಸುಮಾರು 600 ಅನಾಥ, ಬೀದಿನಾಯಿಗಳಿಗೆ ಊಟ, ತಿಂಡಿ ನೀಡುತ್ತಾರೆ. ಗಾಯಗೊಂಡ ನಾಯಿಗಳ ಆರೈಕೆ ಮಾಡುತ್ತಾರೆ. ಕೆಲವು ಸಮಯದಿಂದ ಬಿಜೈಯಲ್ಲಿ ತೆರೆದ ಬಾವಿಯೊಂದಕ್ಕೆ ಬಿದ್ದಿದ್ದ ಬೀದಿನಾಯಿಯನ್ನು ರಕ್ಷಿಸಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಶನಿವಾರ ಬೆಳಗ್ಗೆ ಬಿಜೈಯ ನ್ಯೂರೋಡಿನಲ್ಲಿ ಬಾವಿಗೆ ಬಿದ್ದಿದ್ದ ಸಾಕುನಾಯಿಯನ್ನು ಸಾಹಸಮಯ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ. ಈ ನಾಯಿ ರಾತ್ರಿ ಹೊತ್ತು ಬಾವಿಗೆ ಬಿದ್ದಿತ್ತು ಎನ್ನಲಾಗಿದೆ.
Next Story