varthabharthi


ಕ್ರೀಡೆ

ಸುರೇಶ್ ರೈನಾ ಅರ್ಧಶತಕ: ಡೆಲ್ಲಿಗೆ 189 ರನ್ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

ವಾರ್ತಾ ಭಾರತಿ : 10 Apr, 2021

ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ(54, 36 ಎಸೆತ, 3 ಬೌಂಡರಿ, 4 ಸಿಕ್ಸರ್)ನೀಡಿದ ಅರ್ಧಶತಕದ ಕೊಡುಗೆಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗೆ 189 ರನ್ ಗುರಿ ನೀಡಿದೆ.

ಶನಿವಾರ ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.

ಚೆನ್ನೈ ಪರ ಮೊಯಿನ್ ಅಲಿ(36), ಸ್ಯಾಮ್ ಕರನ್ (34), ರವೀಂದ್ರ ಜಡೇಜ(26)  ಹಾಗೂ ಅಂಬಟಿ ರಾಯುಡು(23)ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಧೋನಿ ಶೂನ್ಯಕ್ಕೆ ಔಟಾದರು. ಇನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್(5) ಹಾಗು ಪ್ಲೆಸಿಸ್(0)ಉತ್ತಮ ಆರಂಭ ಒದಗಿಸಲು ವಿಫಲರಾದರು. ಪ್ಲೆಸಿಸ್ 2ನೇ ಓವರ್ ನ 4ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಡೆಲ್ಲಿ ಪರವಾಗಿ ಕ್ರಿಸ್ ವೋಕ್ಸ್ (2-18) ಹಾಗೂ ಆವೇಶ್ ಖಾನ್(2-23)ತಲಾ ಎರಡು ವಿಕೆಟ್ ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)