varthabharthi


ಕ್ರೀಡೆ

ಚೆನ್ನೈ ನಾಯಕ ಧೋನಿಗೆ 12 ಲಕ್ಷ ರೂ. ದಂಡ

ವಾರ್ತಾ ಭಾರತಿ : 11 Apr, 2021

ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಾನಾಡಿದ 2021ರ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿರುವುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ)ನಾಯಕ ಎಂ.ಎಸ್.ಧೋನಿ ಅವರಿಗೆ ದಂಡ ವಿಧಿಸಲಾಗಿದೆ.

ಕಡಿಮೆ ಓವರ್ ಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಪ್ರಕಾರ ಈ ಋತುವಿನಲ್ಲಿ ಇದು ಚೆನ್ನೈ ತಂಡದ ಮೊದಲ ಪ್ರಮಾದವಾಗಿದೆ. ಹೀಗಾಗಿ ಎಂಎಸ್ ಧೋನಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಐಪಿಎಲ್ 2021ರ ನೀತಿ ಸಂಹಿತೆಯ ಪ್ರಕಾರ ಪ್ರತಿ ಗಂಟೆಗೆ 14.1 ಓವರ್ ಗಳನ್ನು ಎಸೆಯಬೇಕು. ಯಾವುದೇ ಅಡಚಣೆ ಇಲ್ಲದ ಪಂದ್ಯಗಳಲ್ಲಿ ತಂಡಗಳು 90 ನಿಮಿಷಗಳಲ್ಲಿ ಪಂದ್ಯವನ್ನು ಮುಗಿಸಬೇಕೆಂದು ಬಿಸಿಸಿಐ ಬಯಸುತ್ತದೆ. 

ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ 8 ಎಸೆತಗಳು ಬಾಕಿ ಇರುವಂತೆಯೇ 189 ರನ್ ಗುರಿ ತಲುಪಿದ್ದು, ರಿಷಭ್ ಪಂತ್ ಬಳಗ 7 ವಿಕೆಟ್ ಗಳಿಂದ ಜಯ ಸಾಧಿಸಿತ್ತು. ಸಿಎಸ್‍ಕೆ ಕೇವಲ 18.4 ಓವರ್ ಬೌಲಿಂಗ್ ಮಾಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)