varthabharthi


ನಿಮ್ಮ ಅಂಕಣ

ಕೊರಗಜ್ಜರ ಹೆಸರಲ್ಲಿ ಒಂದಾಗೋಣ

ವಾರ್ತಾ ಭಾರತಿ : 11 Apr, 2021
ಎಸ್. ಎನ್. ಪ್ರವೀಣ್ ಶೆಟ್ಟಿ, ಮಂಗಳೂರು

ಮಾನ್ಯರೇ,

ಇತ್ತೀಚೆಗೆ ಸಾರ್ವಜನಿಕವಾಗಿ ಕೊರಗಜ್ಜರ ಮಹಿಮೆಯ ಕುರಿತಂತೆ ಚರ್ಚೆಯಾಗುತ್ತಿರುವುದು, ಜನರು ಕೊರಗಜ್ಜನ ಕುರಿತಂತೆ ಆಸಕ್ತಿ ತೋರುತ್ತಿರುವುದು ಆಶಾದಾಯಕ ಸಂಗತಿ. ದಕ್ಷಿಣ ಕನ್ನಡದ ಯಾವುದೇ ರಿಕ್ಷಾ, ವಾಹನಗಳಲ್ಲಿ ನೋಡಿದರೂ ‘ಸ್ವಾಮಿಯೇ ಕೊರಗಜ್ಜ’ ಎಂದು ಬರೆದಿರುವುದು ಕಾಣುತ್ತದೆ. ಅಷ್ಟರ ಮಟ್ಟಿಗೆ ತುಳುವರು ಕೊರಗಜ್ಜರನ್ನು ನಂಬುತ್ತಾರೆ. ಕೊರಗಜ್ಜರು ತುಳುವರ ಹಿರಿಯರು. ದೇವಸ್ಥಾನದೊಳಗೆ ತನಗೆ ಪ್ರವೇಶ ಸಿಕ್ಕದೆ ಇದ್ದಾಗ ‘ನಾವು ಹೊತ್ತು ತಂದ ತರಕಾರಿ ಆಗುತ್ತದೆ, ನಾವೇಕೆ ನಿಮಗೆ ಬೇಡ?’ ಎಂದು ಕೇಳಿದವರು. ಬ್ರಾಹ್ಮಣರ ಜಾತೀಯತೆಯನ್ನು ಪ್ರಶ್ನಿಸಿದವರು. ಬ್ರಾಹ್ಮಣರು ತುಳುನಾಡಿಗೆ ಹೊರಗಿನಿಂದ ಬಂದವರು. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಹಿಡಿತ ಬ್ರಾಹ್ಮಣರ ಕೈಯಲ್ಲಿರುವುದು ಬೇಸರದ ಸಂಗತಿ. ದೇವಸ್ಥಾನದ ಮರವೊಂದಕ್ಕೆ ಹತ್ತಿ ಮಾವಿನ ಮಿಡಿ ಕೊಯ್ಯುವಾಗ ಕೊರಗಜ್ಜರ ಕೈ ಗುಡಿಯ ಗೋಪುರಕ್ಕೆ ಸ್ಪರ್ಶವಾಯಿತು ಎಂದು ಅಜ್ಜನನ್ನು ಮಾಯ ಮಾಡಿದವರು ಯಾರು ಎನ್ನುವುದನ್ನು ತುಳುವರಿಗೆ ತಿಳಿಸಿ ಜಾಗೃತಿಯನ್ನು ಮಾಡಿಸಬೇಕಾದ ದಿನ ಬಂದಿದೆ. ಇಂದಿಗೂ ಕೆಲವು ಕ್ಷೇತ್ರಗಳಲ್ಲಿ ಕೆಳಜಾತಿಯವರಿಗೆ ಪ್ರವೇಶವಿಲ್ಲ. ಪಂಕ್ತಿ ಭೇದವಿದೆ. ಮೇಲ್‌ಜಾತಿ ಜನರು ಕೊರಗಜ್ಜನ ಹೆಸರನ್ನು ತಮ್ಮ ಮನೆಯ ಮುಂದೆ ಇಡುವುದೂ ಇಲ್ಲ. ಕೊರಗಜ್ಜನ ಪ್ರತಿಮೆಯನ್ನು ದೇವರ ಕೋಣೆಗೆ ತಂದದ್ದೂ ಇಲ್ಲ. ಈ ನಿಟ್ಟಿನಲ್ಲಿ, ಅಸ್ಪಶ್ಯತೆಯ ವಿರುದ್ಧ ಕೊರಗಜ್ಜನ ಹೆಸರಲ್ಲಿ ತುಳುವರು ಒಂದಾಗುವುದು ಅತ್ಯಗತ್ಯವಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)