varthabharthi


ಕ್ರೀಡೆ

ಎಟಿಪಿ ಪಂದ್ಯಾವಳಿ

ಇಟಲಿಯ ಪ್ರಶಸ್ತಿ ಬರ ನೀಗಿಸಿದ ಸೋನೆಗೊ

ವಾರ್ತಾ ಭಾರತಿ : 12 Apr, 2021

 ಕಾಗ್ಲಿಯಾರಿ (ಇಟಲಿ): ಇಟಲಿಯ ಲೊರೆಂಜೊ ಸೋನೆಗೊ ಅವರು ಹಾಲಿ ಚಾಂಪಿಯನ್ ಸೆರ್ಬಿಯಾದ ಲಾಸ್ಲೊ ಡಿಜೆರೊ ಅವರನ್ನು ಮಣಿಸಿ ಇಟಲಿಯ ಪ್ರಶಸ್ತಿಯ ಬರ ನೀಗಿಸಿದ್ದಾರೆ.

      ಮೂರನೇ ಶ್ರೇಯಾಂಕಿತ ಸೋನೆಗೊ ಅವರು ರವಿವಾರ ಮೂರು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಡಿಜೆರೊ ಅವರನ್ನು 2-6, 7-6 (7/5), 6-4ರಿಂದ ಮಣಿಸಿ ತನ್ನ ವೃತ್ತಿಜೀವನದ ಎರಡನೇ ಎಟಿಪಿ ಪ್ರಶಸ್ತಿಯನ್ನು ಬಾಚಿಕೊಂಡರು.

 ಬಳಿಕ ತವರಿನಲ್ಲಿ ಟ್ರೋಫಿಯನ್ನು ಎತ್ತಿದ ಮೊದಲ ಇಟಲಿಯ ಆಟಗಾರ ಎಂಬ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫಿಲಿಪ್ಪೊ ವೊಲಂಡ್ರಿ ಅಕ್ಟೋಬರ್ 2006ರಲ್ಲಿ ಪಲೆರ್ಮೊದಲ್ಲಿ ಎಟಿಪಿ ಪ್ರಶಸ್ತಿ ಜಯಿಸಿದ್ದರು. 25ರ ಹರೆಯದ ಸೋನೆಗೊ ಕಳೆದ ವರ್ಷ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)