varthabharthi


ಕ್ರೀಡೆ

ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ

ವಾರ್ತಾ ಭಾರತಿ : 12 Apr, 2021

ಮುಂಬೈ, ಎ.12: ರಾಜಸ್ಥಾನ ರಾಯಲ್ಸ್ ಬೌಲರ್ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರು ಐಪಿಎಲ್ ಇತಿಹಾಸದಲ್ಲಿ ಒಟ್ಟು 350 ಸಿಕ್ಸರ್ ಸಿಡಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ಕುತೂಹಲಕಾರಿ ವಿಷಯವೆಂದರೆ ಯಾವೊಬ್ಬ ಬ್ಯಾಟ್ಸ್‌ಮನ್ ಈ ತನಕ 250 ಸಿಕ್ಸರ್‌ಗಳನ್ನು ಸಿಡಿಸಿಲ್ಲ. ಎಬಿ ಡಿವಿಲಿಯರ್ಸ್ (237)ಎರಡನೇ ಸ್ಥಾನದಲ್ಲಿದ್ದಾರೆ.

ಜಮೈಕಾ ಬ್ಯಾಟ್ಸ್‌ಮನ್ ಗೇಲ್ ಕಳೆದ ವರ್ಷ ಯುಎಇನಲ್ಲಿ ನಡೆದಿದ್ದ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಕಳೆದ ವರ್ಷ ಕೇವಲ 7 ಪಂದ್ಯಗಳಲ್ಲಿ ಆಡಿದ್ದ ಗೇಲ್ ಒಟ್ಟು 288 ರನ್ ಗಳಿಸಿದ್ದರು. ಒಟ್ಟು 23 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಸೋಮವಾರ ರಾಹುಲ್ ಟೆವಾಟಿಯಾ ಬೌಲಿಂಗ್‌ನಲ್ಲಿ 351ನೇ ಸಿಕ್ಸರ್ ಸಿಡಿಸಿದ ಗೇಲ್ 40 ರನ್ ಗಳಿಸಿ ರಿಯಾನ್ ಪರಾಗ್‌ಗೆ ವಿಕೆಟ್ ಒಪ್ಪಿಸಿದರು.

41ರ ಹರೆಯದ ವಿಂಡೀಸ್ ಬ್ಯಾಟ್ಸ್‌ಮನ್ ಗೇಲ್ ಕಳೆದ 13 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 133 ಪಂದ್ಯಗಳಲ್ಲಿ ಆಡಿದ್ದು, ಒಟ್ಟು 4,800 ರನ್ ಗಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)