varthabharthi


ಕರಾವಳಿ

ಮೊಂಟೆಪದವು: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ಬ್ಯಾರಿಕೇಡ್ ಅಳವಡಿಕೆ

ವಾರ್ತಾ ಭಾರತಿ : 12 Apr, 2021

ಕೊಣಾಜೆ : ರಸ್ತೆ ಸುರಕ್ಷತಾ ಕಾರ್ಯಕ್ರಮದ ಭಾಗವಾಗಿ ಅಪಘಾತಗಳನ್ನು ತಡೆಯಲು ಮಂಗಳೂರು ಸಿಟಿ ಸಂಚಾರಿ ಪೊಲೀಸ್ ಅವರ ನೇತೃತ್ವದಲ್ಲಿ, ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ವತಿಯಿಂದ ಮೊಂಟೆಪದವು ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಯಿತು‌.

ಕಾರ್ಯಕ್ರಮದಲ್ಲಿ ಮಂಗಳೂರು ನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಆಗಮಿಸಿ, ಅಪಘಾತಗಳನ್ನು ತಡೆಯಲು ಸಂಘ ಸಂಸ್ಥೆಗಳು ಮುಂದೆ ಬಂದು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿರುವುದು ಆಭಿನಂದನಾರ್ಹ. ಮುಂದೆ ಎಲ್ಲರಿಗೂ ಇದು ಮಾದರಿಯಾಗಲಿ ಎಂದು ಆಶಿಸಿದರು‌‌‌.

ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಂಟರ್ ಮೊಂಟೆಪದವು ಇದರ ಅಧ್ಯಕ್ಷರಾದ ಮ್ಯೊದಿನ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮಾ ಮೊಂಟೆಪದವು ಇದರ ಅಧ್ಯಕ್ಷರಾದ ಖಾದರ್ ಕಲಜೇರಿ ಉದ್ಘಾಟಿಸಿದರು‌. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು, ಊರಿನ ಹಿರಿಯ ನಾಗರಿಕರು, ಮತ್ತಿತ್ತರರು ಉಪಸ್ಥಿತರಿದ್ದರು‌.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)