varthabharthi


ನಿಮ್ಮ ಅಂಕಣ

ಅರ್ಥಹೀನ ನಿಯಮಗಳು ಬೇಕೇ?

ವಾರ್ತಾ ಭಾರತಿ : 12 Apr, 2021
-ಸಂತೋಷ ಜಾಬೀನ್ ಸುಲೇಪೇಟ, ಕಲಬುರಗಿ

ಮಾನ್ಯರೇ,
‘‘ಜನತೆ ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಪಾಲಿಸುವ ಮೂಲಕ ಸಹಕಾರ ನೀಡಬೇಕು. ಇಲ್ಲವಾದರೆ ಲಾಕ್‌ಡೌನ್ ಅನಿವಾರ್ಯವಾಗಲಿದೆ’’ ಎಂದು ರಾಜ್ಯ ಸರಕಾರ ಜನತೆಗೆ ಪದೇ ಪದೇ ಲಾಕ್‌ಡೌನ್ ಭೀತಿ ಹುಟ್ಟಿಸುತ್ತಿರುವುದು ವಿಷಾದನೀಯ.

ರಾಜ್ಯ ಸರಕಾರ ಈಗಾಗಲೇ ಎಪ್ರಿಲ್ 10ರಿಂದ 20ರವರೆಗೆ ಬೆಂಗಳೂರು ಸಹಿತ ರಾಜ್ಯದ ಎಂಟು ನಗರಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ವಿಧಿಸಿದೆ. ಆದರೆ ಈ ಕ್ರಮದಿಂದ ನಿಜಕ್ಕೂ ಸೋಂಕು ಪ್ರಸಾರ ತಡೆ ಸಾಧ್ಯವಿದೆಯೇ? ಕೊರೋನ ಸಾಂಕ್ರಾಮಿಕವು ರಾತ್ರಿ 10ರ ಬಳಿಕ ದಾಳಿ ಮಾಡಿ ಬೆಳಗ್ಗೆ ಐದು ಗಂಟೆಗೆಲ್ಲಾ ಮಾಯ ಆಗಿಬಿಡುತ್ತದೆಯೇ? ಇದು ಹಾಸ್ಯಾಸ್ಪದ ಹಾಗೂ ತರ್ಕಹೀನ ನಿಯಮವಾಗಿದೆ. ಇನ್ನಾದರೂ ಇಂತಹ ಕಾಟಚಾರದ ನಿಯಮಗಳು, ಮಾರ್ಗಸೂಚಿಗಳನ್ನು ಹೊರಡಿಸುವುದನ್ನು ಬಿಟ್ಟು ಸರಕಾರ ಬೇರೆ ಕೆಲಸದತ್ತ ಗಮನನೀಡಬೇಕಾಗಿದೆ. ಅಲ್ಲದೆ ಜನರಲ್ಲಿರುವ ಕೊರೋನ ಭಯವನ್ನು ಕಿತ್ತುಹಾಕಲು ಸರಕಾರ ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ಪರಿಣಾಮಗಳನ್ನು ಊಹಿಸಲೂ ಅಸಾಧ್ಯವಾಗುತ್ತದೆ. ಹಸಿವಿನ ರೋಗಕ್ಕಿಂತ ಮತ್ತೊಂದು ರೋಗವಿಲ್ಲ ಎಂಬುದನ್ನು ಸರಕಾರ ಮೊದಲು ತಿಳಿಯಲಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)