ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ: ಬೆನ್ ಸ್ಟೋಕ್ಸ್ ಐಪಿಎಲ್ನಿಂದ ಔಟ್
Ben Stokes (Photo credit: Twitter @rajasthanroyals)
ಮುಂಬೈ, ಎ.14: ಕಿಂಗ್ಸ್ ಇಲೆವೆನ್ ಪಂಜಾಬ್ ಜತೆಗಿನ ಆರಂಭಿಕ ಪಂದ್ಯದ ವೇಳೆ ಬೆರಳು ಮುರಿತಕ್ಕೆ ಒಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಆಟಗಾರ, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್ನಿಂದ ನಿರ್ಗಮಿಸಿದ್ದಾರೆ. ಆದರೆ ಬ್ರಿಟನ್ಗೆ ಮರಳುವ ಮುನ್ನ ಕೆಲ ದಿನಗಳ ಕಾಲ ಭಾರತದಲ್ಲೇ ಉಳಿಯಲಿದ್ದಾರೆ.
"ರಾಜಸ್ಥಾನ ರಾಯಲ್ಸ್ ಆಲ್ರೌಂಡರ್ ಬೆನ್ ಸ್ಟ್ರೋಕ್ಸ್ ಅವರು ಎಪ್ರಿಲ್ 12ರಂದು ಮುಂಬೈನಲ್ಲಿ ನಡೆದ ಕಿಂಗ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು" ಎಂದು ರಾಯಲ್ಸ್ ಪ್ರಕಟನೆ ನೀಡಿದೆ. ಬಳಿಕ ನಡೆಸಿದ ತಪಾಸಣೆಯಿಂದ ಬೆರಳು ಮುರಿದಿರುವುದು ಖಚಿತವಾಗಿದೆ. ಇದರಿಂದಾಗಿ ದುರಾದೃಷ್ಟವಶಾತ್ ಅವರು ಐಪಿಎಲ್2021 ಸೀಸನ್ನಿಂದ ಹೊರಗುಳಿಯಬೇಕಾಗಿದೆ" ಎಂದು ಹೇಳಿದೆ.
ಕೈ ಶಸ್ತ್ರಚಿಕಿತ್ಸೆಯಿಂದಾಗಿ ಈಗಾಗಲೇ ಜೋಫ್ರಾ ಆರ್ಚರ್ ಅವರ ಸೇವೆಯನ್ನು ಕಳೆದುಕೊಂಡಿರುವ ರಾಯಲ್ಸ್ ತಂಡಕ್ಕೆ ಇದು ಮತ್ತೊಂದು ಆಘಾತವಾಗಿದೆ. ರಾಜಸ್ಥಾನ ರಾಯಲ್ಸ್ನ ಪ್ರತಿಯೊಬ್ಬರೂ ಬೆನ್ ಅವರನ್ನು ತಂಡದ ದೊಡ್ಡ ಆಸ್ತಿ ಹಾಗೂ ಮೌಲ್ಯಯುತ ಆಟಗಾರ ಎಂದು ಹೊಗಳುತ್ತಿದ್ದು, ಬೇಗನೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಭಾರತದಲ್ಲೇ ಇದ್ದುಕೊಂಡು ಮೈದಾನದ ಹೊರಗೆ ತಂಡಕ್ಕೆ ಮೌಲಿಕ ನೆರವನ್ನು ನೀಡಲಿದ್ದಾರೆ. ಸೀಸನ್ಗೆ ಸಂಭಾವ್ಯ ಬದಲಾವಣೆಯ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದು ಪ್ರಕಟನೆ ಹೇಳಿದೆ.