varthabharthi


ಕ್ರೀಡೆ

ಜೈದೇವ್ ಉನದ್ಕಟ್, ಮುಸ್ತಫಿಝರ್ರಹ್ಮಾನ್ ಮಾರಕ ದಾಳಿ

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ 147/8

ವಾರ್ತಾ ಭಾರತಿ : 15 Apr, 2021

ಮುಂಬೈ: ನಾಯಕ ರಿಷಭ್ ಪಂತ್ ಅರ್ಧಶತಕದ ಕೊಡುಗೆ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.

ಐಪಿಎಲ್ ನ 7ನೇ ಪಂದ್ಯದಲ್ಲಿ ಟಾಸ್ ಜಯಿಸಿದ ರಾಜಸ್ಥಾನ ರಾಯಲ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪಂತ್ ಏಕಾಂಗಿ ಹೋರಾಟದ(51, 32 ಎಸೆತ, 9 ಬೌಂಡರಿ)ಹೊರತಾಗಿಯೂ ಡೆಲ್ಲಿಯನ್ನು 150ರೊಳಗೆ ನಿಯಂತ್ರಿಸಲು ಯಶ ಕಂಡಿತು.

ಶಿಖರ್ ಧವನ್(9), ಪೃಥ್ವಿ ಶಾ(2), ಅಜಿಂಕ್ಯ ರಹಾನೆ(8) ಒಂದಂಕಿ ಸ್ಕೋರ್ ಗಳಿಸಿದರು. ಟಾಮ್ ಕರನ್(21)  ಲಲಿತ್ ಯಾದವ್(20)ಹಾಗೂ ಕ್ರಿಸ್ ವೋಕ್ಸ್(15)ಎರಡಂಕೆಯ ಸ್ಕೋರ್ ಗಳಿಸಿದರು. ರಾಜಸ್ಥಾನ ಪರವಾಗಿ ಜಯದೇವ್ ಉನದ್ಕಟ್(3-15) ಹಾಗೂ ಮುಸ್ತಫಿಝುರ್ರಹ್ಮಾನ್(2-29)ಐದು ವಿಕೆಟ್ ಹಂಚಿಕೊಂಡರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)