varthabharthi


ಕರಾವಳಿ

ಅರ್ಹರಿಗೆ ಸಲ್ಲಬೇಕಾದ ಪಾಲು ತಲುಪಿಸುವ ಕೆಲಸ ಎಸ್‌ವೈಎಸ್‌ನಿಂದ ನಡೆಯುತ್ತಿದೆ: ಸಾದಾತ್ ತಂಙಳ್

ವಾರ್ತಾ ಭಾರತಿ : 21 Apr, 2021

ಬೆಳ್ತಂಗಡಿ: ನಮ್ಮ ಸಂಪತ್ತು ಮತ್ತು ಆದಾಯದಲ್ಲಿ ಇಸ್ಲಾಂ ಶರೀಅತ್‌ನಲ್ಲಿ ಸೂಚಿಸಿದಂತೆ ಒಂದು ಪಾಲು ಸಮಾಜದಲ್ಲಿನ ಅರ್ಹರಿಗೆ ಸಂದಾಯವಾಗಬೇಕಾಗಿರುವಂತಹದ್ದು, ಅದು ನಮ್ಮ ಪಾಲಿನ ದಾನವಲ್ಲ ಬದಲಾಗಿ ನಮ್ಮಿಂದ ಸ್ವೀಕರಿಸುವವರ ಹಕ್ಕಾಗಿದೆ. ಅಂತಹಾ ಅರ್ಹರಿಗೆ ಅವರ ಪಾಲನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಎಸ್‌ವೈಎಸ್ ಗುರುವಾಯನಕೆರೆ ಶಾಖೆ ಮಾಡುತ್ತಿದೆ ಎಂದು ಗುರುವಾಯನಕೆರೆ ಜಮಾಅತ್ ಖತೀಬ್ ಹಾಗೂ ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಹೇಳಿದರು.

ಸುನ್ನೀ ಯುವಜನ ಸಂಘ ಎಸ್‌ವೈಎಸ್ ಗುರುವಾಯನಕೆರೆ ಬ್ರಾಂಚ್ ಸಮಿತಿ ವತಿಯಿಂದ ಗುರುವಾಯನಕೆರೆ ಮತ್ತು ಸುನ್ನತ್‌ಕೆರೆ ಇಲ್ಲಿನ ಆಯ್ದ 50 ಕುಟುಂಬಗಳಿಗೆ ರಂಝಾನ್ ಅಗತ್ಯ ಆಹಾರ ಸಾಮಾಗ್ರಿಗಳುಳ್ಳ ಕಿಟ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಬ್ರಾಂಚ್ ಅಧ್ಯಕ್ಷ ಹಸನ್ ಸಖಾಫಿ ವಹಿಸಿದ್ದರು.

ಗುರುವಾಯನಕೆರೆ ಮುದರ‍್ರಿಸ್ ಆದಂ ಅಹ್ಸನಿ, ಪತ್ರಕರ್ತ  ಅಶ್ರಫ್ ಆಲಿಕುಂಞಿ ಮುಂಡಾಜೆ, ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಲತೀಫ್ ಹಾಜಿ ಎಸ್‌ಎಮ್‌ಎಸ್, ಮಾಜಿ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್, ಎಸ್‌ವೈಎಸ್ ಸೆಂಟರ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಎಸ್‌ವೈಎಸ್ ಶಾಖೆಯ ಉಸ್ತುವಾರಿ ಅಬೂಸ್ವಾಲಿಹ್ ಪರಪ್ಪು, ಎಸ್ಸೆಸ್ಸೆಫ್ ಗುರುವಾಯನಕೆರೆ ಶಾಖೆ ಅಧ್ಯಕ್ಷ ಮುಹಮ್ಮದ್ ಇಮ್ತಿಯಾಝ್ ಸಖಾಫಿ ಇವರು ಶುಭ ಕೋರಿದರು.

ದರ್ಗಾ ಸಮಿತಿ ಕಾರ್ಯದರ್ಶಿ ಉಸ್ಮಾನ್ ಬಳಂಜ, ಜಮಾಅತ್ ಕಮಿಟಿ ಕಾರ್ಯದರ್ಶಿ ಅಯೂಬ್ ಖಾನ್, ಪ್ರಮುಖರಾದ ಜಿ.ಎಸ್ ಆದಂ ಸಾಹೇಬ್ ಗುರುವಾಯನಕೆರೆ, ಆಲಿಯಬ್ಬ ಮೇಸ್ತಿ, ಶೇಖುಂಞಿ, ಅಶ್ರಫ್ ಹೊಟೇಲ್, ಜಿ.ಕೆ ಉಮರ್ ಮೊದಲಾದವರು ಉಪಸ್ಥಿತರಿದ್ದರು.

ಎಸ್.ವೈ,ಎಸ್ ಬ್ರಾಂಚ್ ಕಾರ್ಯದರ್ಶಿ ಹಾಜಿ ಹಸೈನಾರ್ ಶಾಫಿ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‌ವೈಎಸ್ ಕೋಶಾಧಿಕಾರಿ ಹಮೀದ್ ಮುಸ್ಲಿಯಾರ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)