varthabharthi


ರಾಷ್ಟ್ರೀಯ

ವೀಡಿಯೋ ವೀಕ್ಷಿಸಿ

ನಾವು ಜೀವ ನೀಡಬೇಕಾದವರು, ಈಗ ಆಕ್ಸಿಜನ್‌ ಕೂಡ ನೀಡಲಾಗುತ್ತಿಲ್ಲ: ಮಾತನಾಡುತ್ತಲೇ ಕಣ್ಣೀರಿಟ್ಟ ದಿಲ್ಲಿ ಆಸ್ಪತ್ರೆ ಸಿಇಒ

ವಾರ್ತಾ ಭಾರತಿ : 22 Apr, 2021

ಹೊಸದಿಲ್ಲಿ: ದೇಶದಾದ್ಯಂತ ಕೋವಿಡ್‌ ಸೋಂಕು ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ದೈನಂದಿನ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ದಿಲ್ಲಿಯಲ್ಲಿ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಹಲವಾರು ಆಸ್ಪತ್ರೆಗಳು ಆಕ್ಸಿಜನ್‌ ಕೊರತೆಯನ್ನೆದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ದಿಲ್ಲಿಯ ಶಾಂತಿ ಮುಖಂಡ್‌ ಆಸ್ಪತ್ರೆಯ ಸಿಇಒ ಸುನೀಲ್‌ ಸಾಗರ್‌ ಕಣ್ಣೀರಿಟ್ಟಿದ್ದಾರೆ.

"ನಾವು ಜನರ ಜೀವವುಳಿಸಬೇಕಾದವರು. ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಡಿಸ್ಚಾರ್ಜ್‌ ಮಾಡಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದೇವೆ. ನಮ್ಮಿಂದ ಆಕ್ಸಿಜನ್‌ ಕೂಡಾ ಕೊಡಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಇಂತಹಾ ಪರಿಸ್ಥಿತಿ ಉಂಟಾಗಿರಲಿಲ್ಲ" ಎಂದು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಸುನೀಲ್‌ ಕಣ್ಣೀರಿಟ್ಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)