varthabharthi


ಕರ್ನಾಟಕ

ಕೊರೋನ ದೃಢಪಟ್ಟು 5 ದಿನಗಳಾದರೂ ಬಿಬಿಎಂಪಿ ನನ್ನನ್ನು ಸಂಪರ್ಕಿಸಿಲ್ಲ: ನಟಿ ಅನು ಪ್ರಭಾಕರ್ ಆರೋಪ

ವಾರ್ತಾ ಭಾರತಿ : 22 Apr, 2021

Photo: Facebook.com/ActorAnuPrabhakar

ಬೆಂಗಳೂರು, ಎ.22: ಕೊರೋನ ದೃಢಪಟ್ಟು ಕಳೆದ 5 ದಿನಗಳಿಂದ ಹೋಂ ಐಸೋಲೇಷನ್‍ನಲ್ಲಿ ಇದ್ದೇನೆ. ಇಲ್ಲಿಯವರೆಗೆ ಬಿಬಿಎಂಪಿ ನನ್ನನ್ನು ಸಂಪರ್ಕಿಸಿಲ್ಲವೆಂದು ನಟಿ ಅನು ಪ್ರಭಾಕರ್ ಆರೋಪಿಸಿದ್ದಾರೆ.

ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಗೆ ಟ್ವೀಟ್ ಮೂಲಕ ಸಂದೇಶ ಕಳುಹಿಸಿರುವ ಅವರು, ಕಳೆದ 5 ದಿನದಿಂದ ಹೋಂ ಐಸೋಲೇಷನ್ ನಲ್ಲಿದ್ದರೂ ಕೋವಿಡ್ ವಾರ್ ವೆಬ್ ಸೈಟ್‍ನಲ್ಲಿ ನನ್ನ ಹೆಸರನ್ನು ಅಪ್ಡೇಟ್ ಮಾಡಿಲ್ಲ. ಈ ಸಂಬಂಧ ನನಗೆ ಬಿಯು ಸಂಖ್ಯೆ ಬಂದಿಲ್ಲ. ಇದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆಂದು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)