ರಾಷ್ಟ್ರೀಯ
ಕೊರೋನಕ್ಕೆ ಅಟಲ್ ಬಿಹಾರಿ ವಾಜಪೇಯಿ ಸೊಸೆ ಕರುಣಾ ಶುಕ್ಲಾ ಬಲಿ
ವಾರ್ತಾ ಭಾರತಿ : 27 Apr, 2021

ಫೋಟೊ ಕೃಪೆ: ANI
ರಾಯಪುರ, ಎ. 26: ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಕರುಣಾ ಶುಕ್ಲಾ ಅವರು ಕೊರೋನ ಸೋಂಕಿನಿಂದ ರಾಜಪುರದ ರಾಮಕೃಷ್ಣ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕರುಣಾ ಶುಕ್ಲಾ ಮಾಜಿ ಪ್ರಧಾನಿ ಅಟಲ್ ವಾಜಪೇಯಿ ಅವರ ಸೊಸೆ.
ಕೊರೋನ ಸೋಂಕು ತಗುಲಿದ ಬಳಿಕ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ಅಂತ್ಯ ಸಂಸ್ಕಾರ ಇಲ್ಲಿನ ಬಾಲೋದಬಝಾರ್ ನಲ್ಲಿ ಇಂದು ನಡೆಯಿತು. ಕರುಣಾ ಶುಕ್ಲಾ ಅವರ ನಿಧನಕ್ಕೆ ಚತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜಕೀಯದಿಂದ ಹೊರತಾಗಿ ಅವರೊಂದಿಗೆ ಆತ್ಮೀಯ ಸಂಬಂಧ ಇತ್ತು ಎಂದು ಅವರು ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)











