varthabharthi


ಅಂತಾರಾಷ್ಟ್ರೀಯ

ಬ್ರೆಝಿಲ್, ದಕ್ಷಿಣ ಆಫ್ರಿಕಗಳ ಪ್ರವಾಸಿಗರಿಗೂ ನಿಷೇಧ

ಭಾರತದಿಂದ ಬರುವವರಿಗೆ ಪ್ರವೇಶ ನಿಷೇಧಿಸಿದ ಬೆಲ್ಜಿಯಮ್

ವಾರ್ತಾ ಭಾರತಿ : 27 Apr, 2021

 ಬ್ರಸೆಲ್ಸ್ (ಬೆಲ್ಜಿಯಮ್), ಎ. 27: ಕೊರೋನ ವೈರಸ್ ಸೋಂಕಿನ ತೀವ್ರ ದಾಳಿಗೆ ಒಳಗಾಗಿರುವ ಭಾರತ, ಬ್ರೆಝಿಲ್ ಮತ್ತು ದಕ್ಷಿಣ ಆಫ್ರಿಕಗಳಿಂದ ಬರುವ ಪ್ರವಾಸಿಗರ ಆಗಮನವನ್ನು ಬೆಲ್ಜಿಯಮ್ ಮಂಗಳವಾರ ನಿಷೇಧಿಸಿದೆ.

‘‘ಭಾರತ, ಬ್ರೆಝಿಲ್ ಮತ್ತು ದಕ್ಷಿಣ ಆಫ್ರಿಕಗಳಿಂದ ಜನರು ವಿಮಾನ, ರೈಲು, ದೋಣಿ ಮತ್ತು ಬಸ್ಗಳಲ್ಲಿ ಬೆಲ್ಜಿಯಮ್ಗೆ ಬರುವುದನ್ನು ನಿಷೇಧಿಸಲಾಗಿದೆ’’ ಎಂದು ಬೆಲ್ಜಿಯಮ್ ಪ್ರಧಾನಿ ಅಲೆಕ್ಸಾಂಡರ್ ಡಿ ಕ್ರೂ ಹೇಳಿಕೆಯೊಂದರಲ್ಲಿ ಪ್ರಕಟಿಸಿದ್ದಾರೆ.

ಕಳೆದ ವಾರ ಪೊಲೀಸರು ಆ್ಯಂಡ್ರೂ ಬ್ರೌನ್ ಜೂನಿಯರ್ ಎಂಬ ಆಫ್ರಿಕನ್ ಅಮೆರಿಕನ್ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಂದಿರುವುದನ್ನು ಪ್ರತಿಭಟಿಸಿ ಅಮೆರಿಕದ ನಾರ್ತ್ ಕ್ಯಾರಲೈನದ ಎಲಿಝಬೆತ್ ನಗರದಲ್ಲಿ ಜನರು ಸೋಮವಾರ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ವಾರಂಟೊಂದನ್ನು ಜಾರಿಗೊಳಿಸುವಾಗ ಪಾಸ್ಕೊಟ್ಯಾಂಕ್ ಕೌಂಟಿ ಶೆರಿಫ್ನ ಪೊಲೀಸರು ಗುಂಡು ಹಾರಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)