varthabharthi


ಕರಾವಳಿ

ಉಪ್ಪಿನಂಗಡಿ: ಎಟಿಎಂಗೆ ನುಗ್ಗಿದ ಕಳ್ಳರು

ವಾರ್ತಾ ಭಾರತಿ : 28 Apr, 2021

ಉಪ್ಪಿನಂಗಡಿ, ಎ.28: ಕಳೆದ ರಾತ್ರಿ ಉಪ್ಪಿನಂಗಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ಕಳ್ಳರು ನುಗ್ಗಿದ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿರುವ ಎಟಿಎಂಗೆ ನಿನ್ನೆ ತಡರಾತ್ರಿ 12 ಗಂಟೆಯ ಬಳಿಕ ಕಳ್ಳ ನುಗ್ಗಿದ್ದು, ಅಲ್ಲಿರುವ ಹಾಗೂ ಪಕ್ಕದ ಮುತ್ತೂಟ್ ಫೈನಾನ್ಸ್ ನ ಸಿಸಿಟಿವಿ ಕ್ಯಾಮರಾವನ್ನು ಒಡೆದು ಹಾಕಿದ್ದಾರೆ.

ಮೇಲ್ನೋಟಕ್ಕೆ ಎಟಿಎಂ ಒಡೆದಿರುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಬೆರಳಚ್ಚು ತಜ್ಞರು ಆಗಮಿಸಿದ ಬಳಿಕವಷ್ಟೇ ಎಟಿಎಂನಿಂದ ಕಳವಾದ ಕುರಿತು ನಿಖರ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರಸ್ತೆಯಲ್ಲಿರುವ ತರಕಾರಿ ಅಂಗಡಿಗೂ ಕಳ್ಳರು ನುಗ್ಗಿದ್ದು, ಅಲ್ಲಿದ್ದ ಹರಕೆ ಡಬ್ಬಿಯನ್ನು ಹೊತ್ತೊಯ್ದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)