ರಾಷ್ಟ್ರೀಯ
ಡಿಎಂಕೆಯಿಂದ ನೀತಿ ಸಂಹಿತೆ ಉಲ್ಲಂಘನೆ: ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು
ವಾರ್ತಾ ಭಾರತಿ : 2 May, 2021

ಚೆನ್ನೈ, ಮೆ 2: ಚೆನ್ನೈಯಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸುವುದನ್ನು ತಡೆಯಲು ವಿಫಲವಾದ ತಮಿಳುನಾಡು ಪೊಲೀಸ್ ಇನ್ಸ್‌ಪೆಕ್ಟರ್ ಅನ್ನು ರವಿವಾರ ಅಮಾನತುಗೊಳಿಸಲಾಗಿದೆ. ದೇಶದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸಂಭ್ರಮಾಚರಣೆಗೆ ಚುನಾವಣಾ ಆಯೋಗ ಹೇರಿದ್ದ ನಿಷೇಧವನ್ನು ಡಿಎಂಕೆಯ ಸಂಭ್ರಮಾಚರಣೆ ಉಲ್ಲಂಘಿಸಿದೆ. ತಮಿಳುನಾಡು ಕಾರ್ಯದರ್ಶಿಗೆ ಚುನಾವಣಾ ಆಯೋಗ ಪತ್ರ ರವಾನಿಸಿದ ಬಳಿಕ ತೇನ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮುರಳಿ ಅವರನ್ನು ಅಮಾನತು ಮಾಡಲಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)











