varthabharthi


ಕರಾವಳಿ

ಗಂಗೊಳ್ಳಿ: ನಿವೃತ್ತ ಮುಖ್ಯಶಿಕ್ಷಕ ಶಾಬುದ್ದಿನ್ ನಿಧನ

ವಾರ್ತಾ ಭಾರತಿ : 2 May, 2021

ಗಂಗೊಳ್ಳಿ, ಮೇ 2: ಮೇಲ್ ಗಂಗೊಳ್ಳಿ ರಹಮಾನಿಯ ಮಸೀದಿ ಬಳಿಯ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ಶಾಬುದ್ದಿನ್ ಅಬೂ ಮೊಹಮ್ಮದ್ ಸಾಹೇಬ್ (78) ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನರಾದರು.

ಮೃತರು ಸರಕಾರಿ ಶಾಲಾ ಶಿಕ್ಷಕರಾಗಿ ಸೇರ್ಪಡೆಗೊಂಡು, ಮುಖ್ಯೋ ಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಉಡುಪಿ ಜಿಲ್ಲೆಯ ಶಿರ್ವ, ಮರವಂತೆ, ಗಂಗೊಳ್ಳಿ ಸಹಿತ ಅನೇಕ ಕಡೆಗಳಲ್ಲಿ ಶಿಕ್ಷಕರಾಗಿ ಸುಮಾರು 35 ಸೇವೆ ಸಲ್ಲಿಸಿದ್ದರು.

ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು, ಪತ್ನಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)