varthabharthi


ಕರಾವಳಿ

ಸ್ಕೈಲೈನ್ ಹೈದರ್ ಹಾಜಿ ನಿಧನ

ವಾರ್ತಾ ಭಾರತಿ : 3 May, 2021

ಮಂಗಳೂರು, ಮೇ 3: ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿ, ಮಂಗಳೂರಿನ ಸ್ಕೈಲೈನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ನ ಮಾಲಕ ಹೈದರ್ ಹಾಜಿ (68) ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ ನಿಧನರಾದರು.

ಮೃತರು‌ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು‌ ಅಗಲಿದ್ದಾರೆ.

ಇವರು ಮಂಗಳೂರಿನಲ್ಲಿ ಸ್ಕೈಲೈನ್ಸ್ ಎಂಬ ಹೆಸರಿನ ಟ್ರಾವೆಲ್ ಏಜೆನ್ಸಿಯನ್ನು ಸುದೀರ್ಘ ವರ್ಷಗಳ ಕಾಲ ನಡೆಸುವ ಮೂಲಕ ಸ್ಕೈಲೈನ್ ಹೈದರ್ ಹಾಜಿ ಎಂದು ಚಿರಪರಿಚಿತರಾಗಿದ್ದರು.

ಉಳ್ಳಾಲದ ಮೇಲಂಗಡಿಯ ಮುಹಿಯುದ್ದೀನ್ ಹೊಸಪಳ್ಳಿ ಜುಮಾ ಮಸ್ಜಿದ್‌ ವಠಾರದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)