varthabharthi


ರಾಷ್ಟ್ರೀಯ

ಮಮತಾ ಬ್ಯಾನರ್ಜಿ ನಮ್ಮ ದೇಶದ ನಾಯಕಿ: ಹಾಡಿ ಹೊಗಳಿದ ಕಾಂಗ್ರೆಸ್ ನಾಯಕ

ವಾರ್ತಾ ಭಾರತಿ : 6 May, 2021

ಭೋಪಾಲ್: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಏಜೆನ್ಸಿಗಳಾದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಈಡಿ) ಸೇರಿದಂತೆ ತನ್ನ ಎಲ್ಲ ವಿರೋಧಿಗಳನ್ನು ಸೋಲಿಸಿದ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಬುಧವಾರ ಹಾಡಿ ಹೊಗಳಿದರು. ಮಮತಾ ಅವರು ಈಗ ನಮ್ಮ ದೇಶದ ನಾಯಕಿ ಎಂದು ಬಣ್ಣಿಸಿದ್ದಾರೆ.

2024 ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಮುಖ್ಯಸ್ಥರನ್ನು ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳ ಮುಖವೆಂದು ಬಿಂಬಿಸಬಹುದೇ ಎಂಬ ಪ್ರಶ್ನೆಗೆ, , ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಈ ಕುರಿತು ಸೂಕ್ತ ಸಮಯದಲ್ಲಿ ನಿರ್ಧರಿಸುತ್ತದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

"ಮಮತಾ ಬ್ಯಾನರ್ಜಿ ಇಂದು ನಮ್ಮ ದೇಶದ ನಾಯಕಿ. ಅವರು ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಕಠಿಣ ಹೋರಾಟದ ನಂತರ ಅವರು ಈ ಹಂತವನ್ನು ತಲುಪಿದ್ದಾರೆ" ಎಂದು ಅವರು ಹೇಳಿದರು.

ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರ, ಪಿಎಂ ಮೋದಿ, ಅವರ ಮಂತ್ರಿಗಳು , ಸಿಬಿಐ, ಜಾರಿ ನಿರ್ದೇಶನಾಲಯ (ಈಡಿ) ಹಾಗೂ ಆದಾಯ ತೆರಿಗೆ ಇಲಾಖೆಯ ವಿರುದ್ಧ ಹೋರಾಡಬೇಕಾಯಿತು "ಆದರೂ ಅವರು ಎಲ್ಲರನ್ನೂ ಒದ್ದು ಓಡಿಸಿದ್ದಾರೆ ('ಸಬ್ಕೊ ಲಾತ್ ಮಾರ್ಕರ್ ಭಾಗಾ ದಿಯಾ')," ಕಮಲನಾಥ್ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)